Breaking News

ಅ. 4 ರಿಂದ ಪಂಚಾಯತಿ ಸೇವೆಗಳು ಬಂದ್: ಜಯಗೌಡ ಪಾಟೀಲ್

Spread the love

ಅ. 4 ರಿಂದ ಪಂಚಾಯತಿ ಸೇವೆಗಳು ಬಂದ್: ಜಯಗೌಡ ಪಾಟೀಲ್

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ಅ.4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆಗಳನ್ನು ನಿಲ್ಲಿಸಿ ಅನಿರ್ಧೀಷ್ಟಾವಧಿ ಹೋರಾಟ ಕೈಗೊಳ್ಳಲಾಗುತ್ತಿದೆ ಎಂದು ಪಿಡಿಓ ಸಂಘ ರಾಜ್ಯ ಕಾರ್ಯದರ್ಶಿ ಜಯಗೌಡ ಪಾಟೀಲ್ ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು,
ರಾಜ್ಯದ ಶೇಕಡ 68 ರಿಂದ 70 ರಷ್ಟು ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯತಿಗಳಿಂದ ಶೇಕಡ 70 ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಅನೇಕರು
ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಯ ದೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ಅ. 4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿಯ ಸೇವೆಗಳಾದ ಬಾಪೂಜಿ ಸೇವೆ ಹಾಗೂ ಕಛೇರಿಯ ಎಲ್ಲಾ ಕರ್ತವ್ಯ ನಿರ್ವಹಿಸುವುದನ್ನು ನಿಲ್ಲಿಸಿ ಅನಿರ್ಧಿಷ್ಟಾವಧಿ ಹೋರಾಟವನ್ನು ಪ್ರೀಡಂ ಪಾರ್ಕ ಬೆಂಗಳೂರಿನಲ್ಲಿ ಕೈಗೊಳ್ಳುತ್ತಿದೇವೆ ಎಂದು ತಿಳಿಸಿದರು.‌

ಈ ವೇಳೆ ಪಿಡಿಓ ಸಂಘದ ಜಿಲ್ಲಾದ್ಯಕ್ಷ ಆನಂದ ಹೊಳೆನ್ನವರ್, ಪಿಡಿಓ ಬಿ ಗ್ರೇಡ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ನದಾಪ್, ಸದಸ್ಯರ ಒಕ್ಕೂಟ ಸಹ ಕಾರ್ಯದರ್ಶಿ ಮಹಾಂತೇಶ್ ಪಶ್ಚಪುರ, ಅರುಣ ಕೌಜಲಗಿ, ದಿಲೀಪ್ ಕಾಂಬಳೆ ಸೇರಿದಂತೆ ಇತರ ಪದಾದಿಕಾರಿಗಳು ಇದ್ದರು.


Spread the love

About Fast9 News

Check Also

ಬಿಜೆಪಿ ಬಲವರ್ಧನೆಯಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಪಾತ್ರ ಅನನ್ಯ- ಸರ್ವೋತ್ತಮ ಜಾರಕಿಹೊಳಿ*

Spread the love*ಬಿಜೆಪಿ ಬಲವರ್ಧನೆಯಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಪಾತ್ರ ಅನನ್ಯ- ಸರ್ವೋತ್ತಮ ಜಾರಕಿಹೊಳಿ* ಗೋಕಾಕ- ಬಿಜೆಪಿಯು ಇಷ್ಟು …

Leave a Reply

Your email address will not be published. Required fields are marked *