ಸರ್ಕಾರ ಇನ್ನು ರೆಮ್ಡಿಸಿವಿರ್ ಪೂರೈಸಲ್ಲ
ರೋಗಿಗಳೇ ನೇರವಾಗಿ ಖರೀದಿಸಬೇಕು
ಬೆಂಗಳೂರು: ರಾಜ್ಯ ಸರ್ಕಾರ ರೆಮ್ಡಿಸಿವಿಆರ್ ಚುಚ್ಚುಮದ್ದನ್ನು ಖರೀದಿಸಿ
ಆಸ್ಪತ್ರೆಗಳಿಗೆ ಹಂಚುವುದನ್ನು ಕೈಬಿಟ್ಟಿದ್ದು, ಮಾರುಕಟ್ಟೆಯಿಂದ ನೇರ ಖರೀದಿ
ನಡೆಸುವಂತೆ ಆಸತ್ರೆಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ
ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್,
ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ರೆಮ್ಡಿಸಿವಿಆರ್
ದಾಸ್ತಾನು ಇರುವುದರಿಂದ ಸರ್ಕಾರ ಪ್ರಕ್ರಿಯೆಯಿಂದ ಹಿಂದೆ
ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಔಷಧ ವಿತರಕರು ರೆಮ್ಡಿಸಿವಿಆರ್
ತಯಾರಿಕ ಸಂಸ್ಥೆಗಳಿಂದ ನಿಯಮಾನುಸಾರ ಪಡೆದು ಮಾರಾಟ ಮಾಡಬೇಕು.
ಆಸತ್ರೆಗಳು, ಸಾರ್ವಜನಿಕರು ರೆಮ್ಡಿಸಿವಿಆರ್ ಚುಚ್ಚುಮದ್ದನ್ನು
ವಿತರಕರಿಂದ ನೇರವಾಗಿ ಪಡೆಯಬಹುದು. ಔಷಧ ಬೆಲೆ ನಿಯಂತ್ರಣ ಆದೇಶ
ಉಲ್ಲಂಘಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಠಿಣ
ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.
Fast9 Latest Kannada News