ಇದೆ 24ರಂದು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-ಶಿವಪುತ್ರ ಜಕಬಾಳ.!
ಗೋಕಾಕ: ಹಿಂದುಳಿದ ಸಮುದಾಯವಾಗಿರುವ ಉಪ್ಪಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ.೨೪ರ ಶನಿವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು.
ಅವರು, ಶನಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಕಾಕ ಮತ್ತು ಮೂಡಲಗಿ ಶ್ರೀ ಭಗೀರಥ ಉಪ್ಪಾರ ಸಂಘದ ಸಹಯೋಗದಲ್ಲಿ ದಿ.24ರಂದು ನಗರದ ಶ್ರೀ ಮಹಾಲಕ್ಷ್ಮಿ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಪಾಲಕರು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳನ್ನು ಕರೆತಂದು ಪ್ರೋತ್ಸಾಹಿಸಬೇಕು ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ90ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ಪಿಯೂಸಿ ಪರೀಕ್ಷೆಯಲ್ಲಿ ಶೇ85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಉಪ್ಪಾರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಆಧಾರ್ ಮತ್ತು ಇತ್ತಿಚಿನ ಪಾಸಪೋರ್ಟ ಸೈಜ್ ಭಾವಚಿತ್ರ ನೀಡಿ ದಿ.15ರ ಒಳಗಾಗಿ ಅರ್ಜಿ ಸಲ್ಲಿಸಲು ವಿನಂತಿಸಿದರು.
ಗೋಕಾಕ ಮತ್ತು ಮೂಡಲಗಿ ಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನಗರದ ನ್ಯಾಯವಾದಿಗಳಾದ ವಾಯ್ ಕೆ ಕೌಜಲಗಿ ಅವರ ಕಾರ್ಯಾಲಯ ತಿಳಗಂಜಿ ಬಿಲ್ಡಿಂಗ್ ಬಸವೇಶ್ವರ ವೃತ್ತ 9481656917, ವಾಯ್ ಎಲ್ ದುರದುಂಡಿ ಅವರ ಕಾರ್ಯಾಲಯ ಹಾರುಗೇರಿ ಕಾಂಪ್ಲೇಕ್ಸ್ ಆನಂದ ಟಾಕೀಸ್ ರೋಡ ಗೋಕಾಕ 9739263742 ಸಂಪರ್ಕಿಸಿ, ಇನ್ನುಳಿದ ತಾಲೂಕಿನ ವಿದ್ಯಾರ್ಥಿಗಳು ತಮ್ಮ ವಾಟ್ಸಾಪ್ ಮುಖಾಂತರ ಸಂಖ್ಯೆ 9741451258-ಚಂದನ, 9164680252-ಮಹೇಶ, 9481692525-ಸದಾನಂದ, 9481740044-ರೇವಪ್ಪ, 9916168622-ಶಂಭುಲಿ0ಗ ಈ ನಂಬರಗಳಿಗೆ ದಿ.15ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಜಿಯವರ ನೇತ್ರತ್ವದಲ್ಲಿ, ನೂತನ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಶ್ರೀ ಭಗೀರಥ ಉಪ್ಪಾರ ಸಂಘದ ಕಾರ್ಯಕಾರಿ ಮಂಡಳಿ ಮತ್ತು ಸಮಾಜದ ಹಿರಿಯರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನದೊಂದಿಗೆ ಗೌರವಿಸುವ ಕಾರ್ಯ ನಡೆಯಲಿದೆ.
ಇದೇ ಸಂದರ್ಭದಲ್ಲಿ ಉಪ್ಪಾರ ಸಮಾಜದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರದ ಪ್ರಚಾರ ಪರಿಕರ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದ ಉಪಾಧ್ಯಕ್ಷರುಗಳಾದ ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ಕಾರ್ಯದರ್ಶಿ ವಿಠ್ಠಲ ಮೆಳವಂಕಿ, ಸದಸ್ಯರುಗಳಾದ ಪರಸಪ್ಪ ಚೂನನ್ನವರ, ಭೀಮಶಿ ಭರಮನ್ನವರ, ಬಸವರಾಜ ಖಾನಪ್ಪನವರ, ಎಸ್ ಎಸ್ ಪಾಟೀಲ, ಮಲ್ಲಿಕಾರ್ಜುನ ಚೌಕಾಶಿ, ಮಾಯಪ್ಪ ತಹಶೀಲ್ದಾರ, ಯಲ್ಲಪ್ಪ ಹೆಜ್ಜೆಗಾರ, ಅಡಿವೆಪ್ಪ ಬಿಲಕುಂದಿ, ಲಕ್ಷ್ಮಣ ಗದಾಡಿ ಉಪಸ್ಥಿತರಿದ್ದರು.