ಕೊರೊನಾಗೆ ಬ್ರೇಕ್ ಹಾಕಲು ಜನರ ಸಹಕಾರ ಅತ್ಯವಶ್ಯ. : ಪಿ,ಎಸ್,ಐ, K ವಾಲಿಕಾರ,
ಗೋಕಾಕ: ಕೊರೋನಾ ಚೈನ್ ಬ್ರೇಕ್ ಮಾಡಲು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಾರದ ಕೊನೆಯ ಮೂರು,ದಿನ,ಶುಕ್ರವಾರದಿಂದ,ಸೋಮವಾರಮುಂಜಾನೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್
ಘೋಷಿಸಿದ್ದು, ಇಂತಹ ಸಂದರ್ಭದಲ್ಲಿ ಯಾರು ಕೂಡಾ
ಮನೆಯಿಂದ ಹೊರಗಡೆ ಬಾರದೆ ಸಹಕರಿಸುವಂತೆ ಗೋಕಾಕ ನಗರ ಠಾಣೆ ಪಿಎಸ್‌ಐ ಕೆ ವಾಲಿಕಾರ ಇವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಇನ್ನು ಕೊರೋನಾ ಸೋಂಕು ಹರಡದಂತೆ ಬೆಳಗಾವಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು,ಕೊರೋನಾ ನಿಯಂತ್ರಿಸಲು ಪೊಲೀಸರು ಸಾಕಷ್ಟು ಪ್ರಯತ್ನಮಾಡುತ್ತಿದ್ದಾರೆ, ಅವರಿಗೂ ಕುಟುಂಬ ಮಕ್ಕಳು, ಹಿರಿಯ ತಂದೆ
ತಾಯಿಗಳು,ಇದ್ದು ಸಾರ್ವಜನಿಕರಲ್ಲಿನ ಅಣ್ಣ ತಮ್ಮಂದಿರು ಕೂಡ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಕಾರಣ ಜನತೆ ತಮ್ಮ ಹಾಗೂ ಸಮಾಜದ ಆರೋಗ್ಯ ಕಾಪಾಡುವ ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಉಳಿದು ಸಹಕಾರ ನೀಡದರೆ ಈ ಸಾವು ಪಡೆದುಕೊಂಡು ನೋವು ನೀಡುತ್ತಿರುವ ಕೊರೋನಾ ಇನ್ನೊಬ್ಬರಿಗೆ ಹರಡದಂತೆಕಟ್ಟಿ ಹಾಕಬಹುದು.
ಆದಕಾರಣ ದಿ.4/06/2021 ಶುಕ್ರವಾರದಿಂದ 07/06/2021 ಸೋಮವಾರ ಬೆಳಗ್ಗೆ 6 ಗಂಟೆಯ ಗೋಕಾಕ ನಗರ ಸಂಪೂರ್ಣ ಲಾಕ್ ಡೌನ್,ಇರುವದರಿಂದ ಸಾರ್ವಜನಿಕರು ಅನಗತ್ಯ ಹೊರಗಡೆ ಬಂದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ ವಿನಾಕಾರಣ ಹೊರಗಡೆ ಬಂದು ತಮ್ಮ ವಾಹನಗಳನ್ನು ಸಿಜ್ ಮಾಡಿದ ನಂತರತಂದೆ ತಾಯಿಗಳಿಗೆ ತೊಂದರೆ ನೀಡಿದಂತಾಗುತ್ತದೆ,ಕಾರಣ ಯಾರೂ ಸರಕಾರ ನಿಯಮ ಉಲ್ಲಂಘಿಸಿದೆ ಮನೆಯಲ್ಲಿಯೆ ಇದ್ದು ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದ್ದಾರೆ.