ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಯುವ ನಾಯಕ ರಾಹುಲ ಜಾರಕಿಹೋಳಿ ಇವರಿಂದ ಚಾಲನೆ”
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಮಚಿನಮರಡಿ ಗ್ರಾಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ,ಪಾಶ್ಚಾಪುರ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಗುಮಚನಮರಡಿ ಗ್ರಾಮದ ಕಮಲಾದೇವಿ ದೇವಾಲಯದ ಅವರಣದಲ್ಲಿ ನಡೆದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಯುವನಾಯಕ ಶ್ರೀಯುತ ರಾಹುಲ್ ಜಾರಕಿಹೊಳಿ ಅವರು ನೆರವೇರಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯುವಕರು ಸಮಾಜಸೇವೆ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು .
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಎಸ್ ಎಸ್ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಗಳಾದ ಪ್ರೊಫೆಸರ್ ಯಲ್ಲಪ್ಪ ಮುಗಳಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಗ್ರಾಮದ ಯುವಕರು ಸಮಾಜಸೇವಕರು ಶಾಸಕರ ಆಪ್ತ ಸಹಾಯಕರಾದ ಫಜಲ್ ಮಕಾನದಾರ ಉಪಸ್ಥಿತರಿದ್ದರು.
ಅಷ್ಟೇ ಅಲ್ಲ ಶಿಬಿರ ಯಶಸ್ಸು ಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭೀಮಶಿ ನಿಪನ್ಯಾಳ,ಗ್ರಾಮ ಪಂಚಾಯತ್ ಸದಸ್ಯರು,ಸಾಬುರಾವ್ ದೇಸಾಯಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಹಿರಿಯರು, ಸರಸ್ವತಿ ಕುರುಬರ ಅಧ್ಯಕ್ಷರು ಗ್ರಾಮ ಪಂಚಾಯತ್ ಪಾಶ್ಚಾಪೂರ,ಶ್ರೀ.ಜಾಕೀರ ನದಾಫ್ ಉಪಾಧ್ಯಕ್ಷರು ,ಬಸವರಾಜ್ ನಾಯಕ್ ,ಸಿದ್ದಪ್ಪಾ ಚೆನ್ನಿಕೊಪ್ಪಿ, ಸಿದ್ದಪ್ಪ ನಾಯಕ್ ,ರಾಮಪ್ಪ ಸನದಿ ,ಗುರುಸಿದ್ಧ ಪಾಟೀಲ್ ಗ್ರಾಮದ ಹಿರಿಯರು ಹಾಗೂ ಶಿಬಿರಾರ್ಥಿಗಳು ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ಎನ್. ಬಿ. ಭೂಮಣ್ಣವರ್ ನಿರ್ವಹಿಸಿದರು ಡಾ ಎಸ್ ಜಿ ಸಜ್ಜನ್ ವಂದಿಸಿದರು.