ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಅಂಗಡಿಗೆ ಬೆಂಕಿ.4 ಲಕ್ಷ ರೂ ಹಾನಿ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಪಟ್ಟಣದ ಸಚೀನ ಸುರೇಶ ಹುಕ್ಕೇರಿ ಮಾಲಿಕತ್ವದ ಅಂಗಡಿ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅಂಗಡಿಯಲ್ಲಿ ಬಾಡಿಗೆದಾರರಾಗಿದ್ದ ಅಸ್ಕರ ಅಹ್ಮದ ಪಟಾಣ ಅವರಿಗೆ ಸೇರಿದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿದೆ.
ಜನನಿಬಿಡ ಪ್ರದೇಶವಾದ ಮಾಯಾಕ್ಕಾ ದೇವಸ್ಥಾನದ ಆವರಣದಲ್ಲಿರುವ ಅಂಗಡಿಗಳಿಗೆ ಬೆಂಕಿ ಹೊತ್ತಿ ಉರಿದು ಭಾರೀ ಹೊಗೆ ಆವರಿಸಿತ್ತು ಸ್ಥಳಿಯರು ಸೇರಿಕೋಡು ಬೆಂಕಿ ನಂದಿಸುಲ್ಲು ಪ್ರಯತ್ನಿಸಿದ್ದರು ನಂತರ ರಾಯಬಾಗ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಘಟನೆಯಿಂದ ಅಪಾರ ಹಾನಿ ಸಂಭವಿಸಿದೆ ತಾಲೂಕಿನ ಅಧಿಕಾರಿ ಆಗಮಿಸಿ ಪರೀಶಿಲನೆ ನಡೆಸಿ ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾಗೂ ನಗದು ರೂಪಾಯಿಗಳು ಕಳೆದುಕೊಂಡ ಬಡ ವ್ಯಾಪಾರಸ್ಥನಿಗೆ ಪರಿಹಾರ ನೀಡಬೇಕಾಗಿದೆ
Fast9 Latest Kannada News