Breaking News

ಅಧಿವೇಶನದಲ್ಲಿ ಸದಾಶಿವ ಆಯೋಗ ಜಾರಿಮಾಡುವಂತೆ ಶಾಸಕ ಪಿ,ರಾಜೀವ ಒತ್ತಾಯಿಸಬೇಕು: ಮುತ್ತಣ್ಣ ಬೆನ್ನೂರ

Spread the love

ಅಧಿವೇಶನದಲ್ಲಿ ಸದಾಶಿವ ಆಯೋಗ ಜಾರಿಮಾಡುವಂತೆ ಶಾಸಕ ಪಿ,ರಾಜೀವ ಒತ್ತಾಯಿಸಬೇಕು: ಮುತ್ತಣ್ಣ ಬೆನ್ನೂರ

ಚಿಂಚಲಿ* : ನಾಳೆ ಬರುವ ಅಧಿವೇಶದಲ್ಲಿ ಕುಡಚಿ ಮತಕ್ಷೇತ್ರ ಶಾಸಕ ಪಿ. ರಾಜೀವ ಅವರು ಸದಾಶಿವ ಆಯೋಗದ ಜಾರಿಗೆ ಬೆಂಬಲ ವ್ಯಕ್ತಪಡೆಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಮಾದಿಗ ಸಮುದಾಯದವರು ಶಾಸಕ ಪಿ ರಾಜೀವ ಅವರಿಗೆ ತಕ್ಕ ಪಾಠ ಕಲಿಸುವುದ್ದಾಗಿ ಮಾದಿಗ ಮೀಸಲಾತಿ ಹೋರಾಟ ಸಮೀತಿ ರಾಜ್ಯಾಧ್ಯಕ್ಷ ಮುತ್ತಣ್ಣಾ ಬೆನ್ನೂರ ಕರೆ ನೀಡಿದರು.

ರಾಯಬಾಗ ತಾಲೂಕಿನ ಯಲ್ಪರಟ್ಟಿ ಗ್ರಾಮದಲ್ಲಿ ನ್ಯಾಯ ಮೂರ್ತಿ ಎ ಜೆ ಸದಾಶಿವ ವರದಿ ಹೋರಾಟ ಸಮನ್ವಯ ಸಮೀತಿ ಇವರ ಸಂಯುಕ್ತ ಆಶ್ರಯದಲ್ಲಿ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದಲ್ಲಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೆರಿಸಿದರು ಮಾತನಾಡುತ್ತಾ. ಕುಡಚಿ ಮತಕ್ಷೇತ್ರ ಶಾಸಕರು ಮಾದಿಗ ಮೀಸಲಾತಿ ಹೋರಾಟದ ವಿರುದ್ಧ ಮಾತನಾಡುವ ಶಾಸಕರನ್ನು ಕೇಳಿವ ಜವಾಬ್ದಾರಿ ಎಲ್ಲರದ್ದಾಗಿದೆ ಮತ್ತು ಚುನಾವಣೆ ಪ್ರತಿನಿಧಿಗಳಿಗೆ ಗ್ರಾಮ ಪಂಚಾಯತಿಯಲ್ಲಿ ಎಷ್ಟು ಅನುಧಾನ ಬಗ್ಗೆ ತಿಳಿದುಕೊಳ್ಳವಷ್ಟರಲ್ಲಿ ಐದು ವರ್ಷ ಕಾಲ ಕಳೆದು ಹೋಗುತ್ತದೆ ಅದಕ್ಕಾಗಿ‌ ನಾವುಗಳು ಜಾಗೃತಿಯಾಗಿ ಅಭಿವೃದ್ಧಿ ಮಾಡುವ ನೂತನ ಸದಸ್ಯರು ಮಾಡುವ ಪ್ರಯತ್ನ ಮಾಡಬೇಕು. ನಾವುಗಳು ಯಾವುದೇ ಪಕ್ಷದ ಶಾಸಕರಾಗಲ್ಲಿ ಅವರುಗಳೊಂದಿಗೆ ಚೆರ್ಚೆ ಮಾಡಿ ನಮ್ಮ ಸಮುದಾಯಕ್ಕೆ ಅಭಿವೃದ್ದಿಯ ಬಗ್ಗೆ ಕೇಳಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮೀತಿ ಹೋರಾಟ ಕೇಳುವ ಧೈರ್ಯವನ್ನು ಮಾಡಬೇಕಾಗಿದೆಂದು ಹೇಳಿದರು.

ಗ್ರಾಮ ಅಭಿವೃದ್ಧಿ ಮಾಡುವುದಕ್ಕೆ ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳು ಹೆಚ್ಚಿನ ಗಮನ ಹರಿಸಬೇಕು ಮತ್ತು ಗ್ರಾಮ ಪಂಚಾಯತ ಸದಸ್ಯರು ದೃಷ್ಚಗಳು ಮರೆತು ಡಾ. ಅಂಬೇಡಕರ ತೊಂದಿದ ದಾರಿಯನ್ನು ನಾವು ಹೋಗಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮೀತಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಐಹೊಳೆ ಕರೆ ನೀಡಿದರು.

ನಾವುಗಳು ಯಾವುದೇ ರಾಜಕೀಯ ಪಕ್ಷದವರು ಇರಲ್ಲಿ ಆದರೆ ಸಮಾಜದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಜಾಗೃತಿಯಾಗಿ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಬೇಕೆಂದು ಸುಕುಮಾರ ಕಿರಣಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಸನದಿ ವಹಿಸಿಕೊಂಡು ಮಾತನಾಡುತ್ತಾ ಮಾದಿಗ ಸಮಾಜದಲ್ಲಿ ಒಕ್ಕಟಿನ ಕೊರತೆಯಾಗುತ್ತಿದ್ದೆ ನಾವುಗಳು ಒಕ್ಕಟಿನಿಂದ ಸಾಗಿದರೆ ನಮ್ಮ‌ಸಮಾಜ ಯಶಸ್ವಿ ಕಾಣುತ್ತೆವೆ. ನಾವುಗಳು ಕೇಟ ಕಾರ್ಯವನ್ನು ಮಾಡುವುದನ್ನು ಬಿಟ್ಟು ಇನ್ನೊಂದು ಸಮಾಜದವರೊಂದಿಗೆ ಹೋದಾನಿಕ್ಕೆ ಮಾಡಿಕೊಂಡು ಹೋಗಬೇಕು. ಶಿಕ್ಷಣದ ಕಡೆ ಹೆಚ್ಚು ಗಮನವನ್ನು ಮಕ್ಕಳಿಗೆ ನೀಡಬೇಕೆಂದು ಅಧ್ಯಕ್ಷತೆ ವಹಿಸಿ ಬಸವರಾಜ ಸನದಿ ಮಾತನಾಡಿದರು.
ನಂತರ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧೆಸಿದ ಅಭ್ಯರ್ಥಿಗಳಿಗೆ ಸನ್ಮಾನಿಸಿದರು

ಈ ಸಂದರ್ಭದಲ್ಲಿ ಯಲ್ಲಪ್ಪ ಕರದಾಳ. ಸುಕುಮಾರ ಕಿರಣಗಿ. ಮಾರುತಿ ಕಲ್ಯಾಣಕರ. ವಿಶ್ವನಾಥ ಗಾಣಿಗೇರ. ವೆಂಕಟೇಶ ಕಮಾಳೆ. ಸುನೀತಾ ಐಹೋಳೆ ರಾಮಾಣ್ಣಾ ಮಾದರ. ನಾಮದೇವ ಮದಾಳೆ. ಪ್ರಸಾದ ಶಿಂಗೆ. ಪ್ರಭುದೇವ ರುದ್ರಾಕ್ಷಿಮಠ ಶಂಕರ ಪೂಜೇರಿ. ಕುಮಾರ ಹಳಕಲ್. ಶಿವಾನಂದ ಮೇತ್ರಿ ಹಾಗೂ ಮಾದಿಗ ಸಮುದಾಯದ ಸಾರ್ವಜನಿಕರು ಉಪಸ್ಥಿತರಿದ್ದರು.

*ಆನಂದ ಕೊಳಿಗುಡ್ಡೆ


Spread the love

About fast9admin

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *