ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು
ಶಿಕ್ಷಣವೇ ಅಸ್ತ್ರ : ಸಚಿನ ಸಮಯ
ಕೊಣ್ಣೂರಿನ ಶ್ರೀ ಆಚಾರ್ಯ ಶಾಂತಿಸಾಗರ ತಪೋವನ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯಲ್ಲಿ 74 ನೆಯ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಭಾರತಾಂಬೆ ಮತ್ತು ಭಾರತ ರತ್ನ ಡಾ:ಬಿ,ಆರ್,ಅಂಬೇಡ್ಕರ ಭಾವ ಚಿತ್ರಕ್ಕೆಪೂಜೆ ಸಲ್ಲಿಸುವುದರ ಮೂಲಕ ನೆರವೆರಿಸಿದರು
ಧ್ವಜಾರೋಹಣ ನೆರವೇರಿಸಿ ಮಾತನಾಡಿದ
ಶಾಂತಿನಾಥ ಹೊಲಸೇಲ್ ಬಜಾರ ಮಾಲಿಕರಾದ ಸಚಿನ ಸಮಯ ಇವರು ಇಂದಿನ ಮಕ್ಕಳೇ ನಾಳಿನ
ಪ್ರಜೆಗಳಾಗಿರುವುದರಿಂದ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಐಕ್ಯತೆಯ ಶಿಕ್ಷಣ ಹಾಗೂ ನೈತಿಕತೆಯ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲೆ ಎಷ್ಟಿದೆಯೋ, ಪಾಲಕರೂ ಸಹ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸುವುದು ಅಷ್ಟೇ ಮುಖ್ಯವಾಗಿದೆ. ಭಾರತ
ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಶಿಕ್ಷಣವೇ ಅಸ್ತ್ರ ಪ್ರತಿಯೊಬ್ಬರೂ ವಿದ್ಯಾವಂತರಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು. ನಂತರ ಅದ್ಯಕ್ಷರಾದ ಜಿನ್ನಪ್ಪಾ ಚೌಗಲಾ ಮಾತನಾಡಿ, ಭಾರತ ದೇಶ ಬೃಹತ್ ಸಂವಿಧಾನ ಹೊಂದಿದ್ದು, ಸರ್ವ ಜನಾಂಗದ ಶಾಂತಿಯ
ತೋಟವಾಗಿದೆ. ನಾವು ವಾಸಿಸುವ ದೇಶದ ಬಗ್ಗೆ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ಗೌರವ ಹೊಂದಬೇಕು. ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.ಈ ವೇಳೆ
ಕ್ರೀಡಾಕೂಟ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಚಿನ ಸಮಯ ಇವರಿಂದ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಇದರಲ್ಲಿ ಚಿಕ್ಕ ಮಕ್ಕಳ ವಂದೆ ಮಾತರಂ ನೃತ್ಯವನ್ನು ಪಾಲಕರು ಅವರ ನೃತ್ಯ ಮೆಚ್ಚಿ ಎರಡನೆ ಬಾರಿ ಮಾಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಮಹಾವೀರ ಬೂದಿಗೊಪ್ಪ,ಸದಸ್ಯರಾದ ಅರುಣ ಹೋಳಿ ,ಸಿದ್ದಪ್ಪ ಬೊರಗಲ್ಲೆ,ಮುಖ್ಯ ಶಿಕ್ಷಕಿಯಾದ ಸುದಾ ಪೂಜೇರಿ.ಹಿರಿಯರಾದ ಬೀಮಪ್ಪ ಬೆಳವಿ,ವಿದ್ಯಾರ್ಥಿಗಳ ಪಾಲಕರು ಹಾಗೂ ಶಿಕ್ಷಕ ವೃಂದವು ಉಪಸ್ಥಿತರಿದ್ದರು.