ಜಾತಿ ಧರ್ಮ ಆಮೇಲೆ ಮೊದಲು ಮಾನವಿಯತೆ: ರಾಹುಲ ಜಾರಕಿಹೋಳಿ
137 ನೆ ಕಾಂಗ್ರೆಸ್ ದಿನಾಚರಣೆ ನಿಮಿತ್ಯ ಗೋಕಾಕದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಗೋಕಾಕದಲ್ಲಿ ಸತೀಶ ಜಾರಕಿಹೋಳಿ ಮಾರ್ಗದರ್ಶನದಂತೆ ರಾಹುಲ ಮತ್ತು ಪ್ರಿಯಾಂಕಾ ಜಾರಕಿಹೋಳಿ ಇವರ ನೇತೃತ್ವದಲ್ಲಿರಕ್ತಧಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಸಿಗೆ ನೀರು ಉಣಿಸುವ ಮೂಲಕ ರಕ್ತಧಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಯುವ ನಾಯಕ ರಾಹುಲ ಜಾರಕಿಹೋಳಿಯವರು ರಕ್ತ ಅವಶ್ಯವಿರುವಂತವರಿಗೆ ಸಹಾಯವಾಗಲು ರಕ್ತದಾನ ಶಿಬಿರ ಮಾಡುವ ಮೂಲಕ 137 ನೆ,ಕಾಂಗ್ರೇಸ್ ಸಂಸ್ಥಾಪನಾ ದಿನ ಆಚರಣೆ ಮಾಡುವುದು ಕಾಂಗ್ರೆಸ್ ಪಕ್ಷ ಮಾತ್ರ, ಈ ಪಕ್ಷ ಬಡವರ ಪರ ಇದೆ ಅನ್ನುವುದಕ್ಕೆ ಈ ಶಿಬಿರವೆ ಸಾಕ್ಷಿ, ಅದಲ್ಲದೆ ಮನುಷ್ಯ ಆಸ್ಪತ್ರೆಗೆ ಹೋದಾಗ ಮೊದಲು ವೈದ್ಯರು ರಕ್ತದ ಗುಂಪು ಪರೀಕ್ಷೆ ಮಾಡುತ್ತಾರೆ ಹೊರತು,ಮನುಷ್ಯನ ಜಾತಿ ಅಲ್ಲ ,ಅದಕ್ಕಾಗಿ ಮಾನವಿಯತೆ ಮೇಲೆ ಜಗತ್ತು ನಡೆಯಬೇಕು ಹೊರತು ಜಾತಿ ಆದಾರದ ಮೇಲೆಲ್ಲಾ,ಜಾತಿ ಧರ್ಮ ಆಮೇಲೆ ಮೊದಲು ಮನುಷ್ಯನಿಗೆ ಮಾನವಿಯತೆ ಮುಖ್ಯ ಎಂದರು.
ಅದೆ ರೀತಿ ಪ್ರೀಯಾಂಕಾ ಜಾರಕಿಹೋಳಿಯವರು ಮಾತನಾಡಿ ರಕ್ತದಾನ ಶಿಬಿರ ಮಾಡುವ ಮೂಲಕ ಮುಖಾಂತರ ಕಾಂಗ್ರೇಸ್ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿದ್ದೇವೆ, ಹೇಗೆ ವೈದ್ಯರು ರಕ್ತದ ಗುಂಪು ಕೇಳುತ್ತಾರೆ ಬದಲು ಜಾತಿ ಕೇಳುವುದಿಲ್ಲೋ ಹಾಗೆ ಕಾಂಗ್ರೇಸ್ ಪಕ್ಷವು ಕೂಡ ಬೇದ ಬಾವ ಮಾಡದೆ ಎಲ್ಲರನ್ನು ಒಗ್ಗಾಟ್ಟಾಗಿಸುತ್ತದೆ, ಬರುವ ಮುಂದಿನ ದಿನಮಾನಗಳಲ್ಲಿ ಮತ್ತೆ ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸಿ ಬಡವರ ಅಬಿವೃದ್ದಿ ಪರ ಕಾರ್ಯಮಾಡುತ್ತದೆ ಎಂದರು.ರಕ್ತದಾನದಿಂದ ಆರೋಗ್ಯ ಉತ್ತೇಜಿತವಾಗುತ್ತದೆ ಹೊರತು ಹಾನಿಯಾಗುವುದಿಲ್ಲ ರಕ್ತದಾನ ಮಾಡುವದರಿಂದ ಜೀವ ಉಳಿಸಿದ ಬಾಗ್ಯ ನಮಗೆ ಬರುತ್ತದೆ ಎಂದರು.ಅದಕ್ಕೆ ಎಲ್ಲ ಯುವಕರು ರಕ್ತದಾನ ಮಾಡಲಿಕ್ಕೆ ಮುಂದೆ ಬರಬೇಕೆಂದರು.
ನಂತರ ರಕ್ತದಾನ ಮಾಡಿದ ದಾನಿಗಳ ಆರೋಗ್ಯ ವಿಚಾರಿಸಿ ದೈರ್ಯ ತುಂಬಿ ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ವೀವೆಕ ಜತ್ತಿ,ಮಂಜುಳಾ ರಾಮಗಾನಟ್ಟಿ,ಗೌಡಪ್ಪ ಹೊಳ್ಯಾಚಿ ,ಜಾಕೀರ ನದಾಪ ಹಾಗೂ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.