ಸಾಧನೆಯನ್ನ ಮಾತನಾಡಬೇಕು,ಮಾತನಾಡುವುದು ಸಾದನೆಯಾಗಬಾರದು: ರಾಹುಲ ಜಾರಕಿಹೋಳಿ
ಹುಕ್ಕೇರಿ : ‘ ಮಾಡಿರುವ ಸಾಧನೆ ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಯಾಗಬಾರದು ಎಂಬ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿಯವರು ನಡೆದು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ನಾವು ಸಹ ನಡೆಯೋಣ’ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಗುಟಗುದ್ದಿ ಗ್ರಾಮದಲ್ಲಿ ನೂತನವಾಗಿ ಸಂಘಟನೆಗೊಂಡ ರಾಹುಲ್ ಜಾರಕಿಹೊಳಿ ಅಭಿಮಾನಿಗಳ ಸಂಘವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು , ಕಳೆದ 20 ವರ್ಷಗಳಿಂದ ಸತೀಶ್ ಜಾರಕಿಹೊಳಿ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ. ಈಗಲೂ ಅವರ ಸಾಧನೆಗಳೇ ಮಾತನಾಡುತ್ತವೆ. ಅವರ ಹಾದಿಯಲ್ಲೇ ನಾವು ನಡೆಯೋಣ ಎಂದರು.
‘ ನೂತನವಾಗಿ ಸಂಘಟನೆಗೊಂಡಿರುವ ರಾಹುಲ್ ಜಾರಕಿಹೊಳಿ ಬಳಗ ಗುಟಗುದ್ದಿ ಗ್ರಾಮಕ್ಕೆ ಸೀಮಿತವಾಗದೇ, ಪ್ರತಿಯೊಂದು ಹಳ್ಳಿ ಹಳ್ಳಿಗೂ ವಿಸ್ತರಿಸಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗಟ್ಟಿನಿಂದ ಸಮಾಜ ಸೇವೆಗೆ ಮುಂದೆ ಬರಬೇಕು. ನಮ್ಮ ಸಮಾಜ ಸೇವೆಗೆ ಹಿರಿಯರು ಸಹ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.
‘ ಈಗಾಗಲೇ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದೇವೆ. ಮುಂದೆಯೂ ಸಹ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕ್ರೀಡೆಗೆ ಮಹತ್ವ ನೀಡುತ್ತೇವೆ. ನಿಮಗೆ ಸಹಾಯ, ಸಹಕಾರವನ್ನು ಈ ಸಂಘಟನೆಯಿಂದ ನೀಡಲಾಗುತ್ತದೆ. ಯಾವುದೇ ಸಮಸ್ಯೆಗಳು ಇದ್ದರೂ ಸಹ ನಮ್ಮನ್ನು ಅಥವಾ ಸ್ಥಳೀಯ ಮುಖಂಡರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಸ್ವಾಮೀಗಳು, ರಾಮಚಂದ್ರ ನಾಯಿಕ, ಮಲ್ಲಪ್ಪ ಪಾಟೀಲ, ಬಸವರಾಜ ನಾಯಿಕ, ಯಲ್ಲಪ್ಪ ಹಂಚಿನಮನಿ, ಶೆಟ್ಟೆಪ್ಪ ಗಿಡ್ಡನಾಯಿಕ, ಮಂಜುನಾಥ ಪಾಟೀಲ, ಸಂಘದ ಅಧ್ಯಕ್ಷ ಲಗಮಪ್ಪ ಗೆಜಲ ನಾಯಿಕ, ಬಸವರಾಜ ನಾಯಿಕ ಸೇರಿದಂತೆ ಇತರರು ಇದ್ದರು.