ಶಾಶ್ವತ ಪುನರ್ವಸತಿಗಾಗಿ ಶಾಸಕರಿಗೆ ಸಪ್ತಸಾಗರ ಗ್ರಾಮಸ್ಥರಿಂದ ಮನವಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮಕ್ಕೆ ಶಾಶ್ವತ ಪುನರ್ವಸತಿಗಾಗಿ ಶಾಸಕರಾದ ಮಹೇಶ ಕುಮಟಳ್ಳಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಮು ಪುಜೇರಿ ಮಾತನಾಡಿ ನಮ್ಮ ಕ್ಷೇತ್ರಕ್ಕೆ ಹಲವಾರು ಅನುದಾನವನ್ನು ತಂದಿದ್ದು ಆದರೆ ಸಣ್ಣಪುಟ್ಟ ವಿಷಯಗಳಿಂದ ಅಧಿಕಾರಿಗಳಿಂದ ಮಾಡಿದ ತಪ್ಪಿನಿಂದ ಅವು ಮುಚ್ಚಿ ಹೊಗುತ್ತಿವೆ ಶಾಲಾ ಕೋಠಡಿಗಳು ಮತ್ತು ಕಾಂಕ್ರೀಟ್ ಬೆಡ್ಡುಗಳು, ಇನ್ನೂ ಹತ್ತು ಹಲವಾರು ಅನುದಾನವನ್ನು ತಂದಿದ್ದಾರೆ ಪ್ರವಾಹ ವಿಷಯ ಬಂದರೆ ಸಣ್ಣ ಪ್ರಮಾಣದಲ್ಲಿ ಬರಲಿ ಅಥವಾ ದೊಡ್ಡ ಪ್ರಮಾಣದಲ್ಲಿ ಬಂದರೆ ಮೊಟ್ಟ ಮೊದಲು ಪ್ರವಾಹ ಬರುವುದು ನಮ್ಮ ದಲಿತ ಸಮುದಾಯಕ್ಕೆ ಬಂದು ನಮ್ಮ ಮನೆಗಳಿಗೆ ನೀರು ನುಗ್ಗಿ ಮನೆಗಳು ಬಿಳುತ್ತವೆ ಆದರೆ ಅದಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಆಸ್ವಾಸನೆ ಅಷ್ಟೇ ಕೊಡುತ್ತಾರೆ ಹಲವು ಬಾರಿ ಸರ್ಕಾರ ಪುನರ್ವಸತಿಗಾಗಿ ಜಮೀನುಗಳನ್ನು ಗುರುತಿಸಿದರು ರೈತರ ತಕರಾದಿಂದ ನಮ್ಮಗೆ ಜಾಗ ಸಿಕ್ಕಿರುವುದಿಲ್ಲ ಆದರೆ ಈಗ ಜಮೀನ ಮಾಲಿಕ ಸರ್ಕಾರ ಯೊಗ್ಯ ದರ ನೀಡಿದರೆ ನಿವೇಶನವನ್ನು ಕೊಡಲು ಒಪ್ಪರುತ್ತಾರೆ ಊರಿನ ಜನರು ಕೂಡ ಆ ಜಾಗವನ್ನು ನೋಡಿ ಒಪ್ಪಿಗೆ ಸೂಚಿಸಿರುತ್ತಾರೆ ಮತ್ತು ಊರಿನ ಹಿರಿಯರ ಸೇರಿ ಠರಾವು ಪಾಸ ಆಗಿರುತ್ತದೆ ಇವೆಲ್ಲ ಪತ್ರಗಳು ನೀರಾವರಿ ಆಪೀಸ್ ದಿಂದ ಮೇಲಾಧಿಕಾರಿಗಳ ಕಛೇರಿಯಲ್ಲಿ ಪಾಯಲ್ ಇರುತ್ತದೆ ಈಗ ಮುಂದಿನ ಕೆಲಸ ನಿಮ್ಮ ಕೈಯಲ್ಲಿ ಇದೆ ಇನ್ನಾದರೂ ನಮ್ಮ ಗ್ರಾಮವನ್ನು ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು
ಈ ವೇಳೆ ದಲಿತ ಮುಖಂಡರಾದ ಅಪ್ಪಸಾಬ ಕಾಂಬಳೆ, ಮಹೇಂದ್ರ ಸುಲಾರೆ, ರಾಮು ಗಸ್ತಿ,ಕಾಸಪ್ಪ ಕಾಂಬಳೆ, ಭೀಮಶಿ ಸುಲಾರೆ, ಸುಭಾಸ ಕಾಂಬಳೆ, ಯಲ್ಲಪ್ಪ ಕಾಂಬಳೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ : ವಿಲಾಸ ಕಾಂಬಳೆ