- ಕನ್ನಡ ಸೇನೆ ವತಿಯಿಂದ ನೂತನ ಅಧಿಕಾರ ವಹಿಸಿಕೊಂಡ ಪಿ ಐ ಸಾಹೇಬರಾದ ಎಚ್ ಡಿ ಮುಲ್ಲಾ ಅವರಿಗೆ ಸತ್ಕಾರಘಟಪ್ರಭಾ: ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಗೋಕಾಕ ತಾಲೂಕು ಘಟಕದ ವತಿಯಿಂದ ಘಟಪ್ರಭಾದ ಪೋಲಿಸ ಠಾಣೆಯಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಎಚ್ ಡಿ ಮುಲ್ಲಾ ಅವರಿಗೆ ಸಂಘಟನೆಯ ಕಾರ್ಯಾಲಯದಲ್ಲಿ ಹೃತ್ಪೂರ್ವಕವಾಗಿ ಸತ್ಕರಸಿ ಸನ್ಮಾನ ಮಾಡಿ ಸ್ವಾಗತಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಡು,ನೆಲ ಜಲ ಭಾಷೆ ಉಳಿವಿಗಾಗಿ ಹೋರಾಟ ನಡೆಸಿಕೊಂಡು ಬಂದಿರುವ ಕನ್ನಡ ಪರ ಸಂಘಟನೆಗಳ ಕಾರ್ಯ ತುಂಬಾ ಶ್ಲಾಘನೀಯವಾಗಿದೆ. ಹೋರಾಟಗಳು,ಪ್ರತಿಭಟನೆಗಳು ಕಾನೂನಾತ್ಮಕವಾಗಿ ಇರಬೇಕು.ಹೋರಾಟದಲ್ಲಿ ಸಾರ್ವಜನಿಕರಿಗೆ ತೊಂದರೆ ಹಾಗೂ ಸರ್ಕಾರಿ ಆಸ್ತಿಪಾಸ್ತಿಗಳಿಗೆ ನಷ್ಟ ಆಗದಂತೆ ಪ್ರತಿಭಟನೆಗಳು ಶಾಂತಿಯುತವಾಗಿ ನೆರವೇರಬೇಕು.ಪ್ರತಿಭಟನೆಗಳಿಗೆ,ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹಕಾರ ನಮ್ಮ ಪೋಲಿಸ್ ಇಲಾಖೆಯಿಂದ ನೀಡುತ್ತದೆ.ಸಂಘಟನೆಗಳು, ಸಾರ್ವಜನಿಕರು ಸಹ ನಮ್ಮ ಇಲಾಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಅಪ್ಪಾಸಾಬ ಮುಲ್ಲಾ ವಹಿಸಿದ್ದರು.ಉಪಾಧ್ಯಕ್ಷ ಶ್ರೀಕಾಂತ ಮಹಾಜನ ಎಲ್ಲರನ್ನೂ ಸ್ವಾಗತಿಸಿ ನೂತನ ಪೋಲಿಸ್ ಅಧಿಕಾರಿ ಎಚ್ ಡಿ ಮುಲ್ಲಾ ಅವರಿಗೆ ಘಟಪ್ರಭಾದ ಸಮಸ್ಯೆಗಳನ್ನು ವಿವರಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಡಾ ರಾಘವೇಂದ್ರ ಪತ್ತಾರ,ಸುರೇಶ ಪತ್ತಾರ, ಕುಮಾರ ಕರ್ಪೂರಮಠ , ಶಿವಾಜಿ ಸಾಂಗ್ಲಿಕರ, ರಿಯಾಜ್ ಬಾಡಕರ, ಸುರೇಶ ದೇಶಪಾಂಡೆ, ರಮಜಾನ ಖೋಜಾ, ರವಿ ಭಾಂಡಗೆ,ಇಮಾಮ್ ಅಂಡಗಿ,ಸೇರಿದಂತೆ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು