ಆಸ್ತಿಗಾಗಿ ತಮ್ಮನ ಮಗನ ಬಲಿ ಪಡೆದುಕೊಂಡ ಪಾಪಿ ದೊಡ್ಡಪ್ಪ
ಆಸ್ತಿಗಾಗಿ ಸ್ವಂತ ತಮ್ಮ ತಮ್ಮನ ನಾಲ್ಕು ವರ್ಷದ ಬಾಲಕನನ್ನು ಕುಡಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ.
ಮಾರುತಿ ವೀರಪ್ಪ ಸಂಕನ್ನವರ (4) ಕೊಲೆಯಾದ ಬಾಲಕ. ಮಗುವನ್ನು ಆಟವಾಡಲೆಂದು ಮನೆಯಲ್ಲೇ ಬಿಟ್ಟು ತಂದೆ ತಾಯಿ ಹೋಲಕ್ಕೆ ಕೆಲಸಕ್ಕೆ ಹೋಗಿದ್ದರು. ಮಗು ಭಿರೇಶ್ವರ ದೇವಸ್ಥಾನದ ಮುಂಭಾಗ ಆಟವಾಡುತ್ತಿದ್ದಾಗ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಗುವಿನ ದೊಡ್ಡಪ್ಪ ಈರಪ್ಪ ಸಂಕನ್ನವರ ಈ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಮೃತ ಬಾಲಕನ ತಂದೆ ಹಾಗೂ ಕೊಲೆ ಮಾಡಿದ ಆರೋಪಿ ಈರಪ್ಪನ ನಡುವೆಆಸ್ತಿ ವಿಚಾರದಲ್ಲಿ ನಡೆದ ಜಗಳದಿಂದಾಗಿ ಈ ಕೊಲೆ ನಡೆದಿರುವುದಾಗಿ ತಿಳಿಸಲಾಗಿದೆ.
ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೈಮನಸ್ಸು ಉಂಟಾಗಿತ್ತು. ಅದೇ ಕಾರಣದಿಂದಾಗಿ ಮಗುವನ್ನು ಕೊಲೆ ಮಾಡಿರುವುದಾಗಿ ತಿಳಿಸಲಾಗಿದೆ. ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಹುಡುಕಾಟಕ್ಕೆ ಪೊಲಿಸರು ಬಲೆ ಬಿಸಿದ್ದಾರೆ.
Fast9 Latest Kannada News