ಕ್ರೀಡೆಯು ಮಕ್ಕಳಿಗೆ ಅತ್ಯಂತ ಆಸಕ್ತಿದಾಯಕ ಚಟುವಟಿಕೆ: ತೊರಣಗಟ್ಟಿ
ಗೋಕಾಕ ತಾಲೂಕಿನ ಧುಪದಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಧುಪದಾಳ
ಇಂದು ನೆಡೆದ ಸನ್ 2022-23ನೇ ಸಾಲಿನ ದುಪದಾಳ ಕೇಂದ್ರ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದ್ದು ಸದರಿ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಎಸ್ ಬಿ ತೋರಣಗಟ್ಟಿ ಮಾತನಾಡಿ
ಕ್ರೀಡೆಯು ಮಕ್ಕಳಿಗೆ ಅತ್ಯಂತ ಆಸಕ್ತಿದಾಯಕ ಚಟುವಟಿಕೆಯಾಗಿದ್ದು ಎಲ್ಲ ಮಕ್ಕಳು ಉತ್ಸಾಹದಿಂದ ಭಾಗವಹಿಸುವ ಚಟುವಟಿಕೆ ಆಗಿರುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳು ಅಭ್ಯಾಸದ ಚಟುವಟಿಕೆಯಲ್ಲಿಯೂ ಉತ್ತಮರಾಗಿರುತ್ತಾರೆ ಎಂದು ಹೇಳಿದರು.
ಅದೇ ರೀತಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿರುವ ರಮೇಶ್ ಕೋಲಕಾರ್ ಮಾತನಾಡಿ
ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರ್ದೇಶನದಂತೆ ಕ್ರೀಡೆಗಳ ನಿರ್ಣಾಯಕರಾಗಿ ಬಂದಿರುವ ದೈಹಿಕ ಶಿಕ್ಷಕರು ಉತ್ತಮ ಫಲಿತಾಂಶವನ್ನು ಕೊಡಬೇಕು, ಯಾವುದೇ ತಾರತಮ್ಯವನ್ನು ಮಾಡಬಾರದು , ಉತ್ತಮ ಕ್ರೀಡಾಪಟುಗಳನ್ನು ಮುಂದೆ ಕಳಿಸಿದರೆ ನಮ್ಮ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತರುತ್ತಾರೆ ಎಂದರು.ಕ್ರೀಡಾಕೂಟದಲ್ಲಿ ಸಮೂಹ ಸಂಪನ್ಮೂಲ ಕೇಂದ್ರದ 11 ಪ್ರಾಥಮಿಕ ಶಾಲೆಗಳು ಭಾಗವಹಿಸಿದ್ದವು. ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು.
ಇದೇ ಸಮಯದಲ್ಲಿ
ಎಲ್ ಕೆ ತೋರನಗಟ್ಟಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾಗಿ ಎಸಡಿಎಂಸಿ ಅಧ್ಯಕ್ಷರಾದ ಮದರಸಾಬ್ ಜಗದಾಳ್, ಅತಿಥಿಗಳಾಗಿ, ರೆಹಮಾನ್ ಮೊಕಾಶಿ, ರವಿ ನಾವಿ, ಸಿದ್ದು ಹಣಬರಟ್ಟಿ, ಭೀಮಶಿ ಮಲ್ಲಾಪುರ, ಸತ್ಯಪ್ಪ ಗಾಡಿವಡ್ಡರ್ ಮುಖ್ಯೋಪಾಧ್ಯಾಯ ಎಚ್,ಎ ಸಂಭೋಜಿ ಭಾಗವಹಿಸಿದ್ದರು.