ದರೂರ ಕ್ಲಸ್ಲರ್ ಮಟ್ಟದ ಕ್ರೀಡಾಕೂಟ, ಸಪ್ತಸಾಗರ ಶಾರದಾ ಶಾಲೆಯ ವಿದ್ಯಾರ್ಥಿ/ನಿಯರ ಅಮೋಘ ಸಾಧನೆ*
ಅಥಣಿ ತಾಲೂಕಿನ ದರೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟ ಹಾಗೂ ಪ್ರೌಢಶಾಲಾ ವಿಭಾಗದಿಂದ ಅಥಣಿ ತಾಲೂಕಾ ಮಟ್ಟದ ಚೆಸ್ ಸ್ಪರ್ಧೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ ಕ್ರೀಡೆಗಳು ದರೂರ ಶಾಲೆಯಲ್ಲಿ ಜರುಗಿದವು.
ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಶಾರದಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿ/ನಿಯರು ಭಾಗವಹಿಸಿದ್ದರು.
*ಪ್ರಾಥಮಿಕ ವಿಭಾಗದ ಗಂಡು ಮಕ್ಕಳ ಕಬಡ್ಡಿ ಗುಂಪು ಆಟದಲ್ಲಿ ಪ್ರಥಮ ಸ್ಥಾನ ಹಾಗೂ ಹೆಣ್ಣು ಮಕ್ಕಳ ಥ್ರೋಬಾಲ್ ಗುಂಪು ಆಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.*
ಶ್ರೇವಂತಿ ಸದಾಶಿವ ಬಡಿಗೇರ ಬಾಲಕಿಯರ ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಗಂಡು ಮಕ್ಕಳ ಚಕ್ರ ಎಸೆತದಲ್ಲಿ ಫಯಾಜ ಪೈಗಂಬರ ಚಿಣಗಿ ಪ್ರಥಮ ಸ್ಥಾನ ಹಾಗೂ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಗಂಡು ಮಕ್ಕಳ ಚಕ್ರ ಎಸೆತದಲ್ಲಿ ಮೈಬೂಬ ಇಬ್ರಾಹಿಂ ಹುಕ್ಕೇರಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
*ಹಾಗೂ ಪ್ರೌಢಶಾಲಾ ವಿಭಾಗದಿಂದ ಅಥಣಿ ತಾಲೂಕಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವರ್ಷಿತಾ ಭರಮಗೌಡ ಪಾಟೀಲ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.*
ಶ್ರೀ ಸುರೇಶ ಸವದಿಯವರ ನೇತೃತ್ವದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರಶಾಂತ ಹಳ್ಳೂರ ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡಿದ್ದರು. ಶ್ರೀ ಮಹ್ಮದ ನದಾಫ ಶಿಕ್ಷಕರು ಗಂಡು ಮಕ್ಕಳ ತಂಡದ ವ್ಯವಸ್ಥಾಪಕರಾಗಿದ್ದರು. ಶಿಕ್ಷಕಿಯರಾದ ಕುಮಾರಿ ರಾಜಶ್ರೀ ಲಾಳಿ ಇವರು ಹೆಣ್ಣು ಮಕ್ಕಳ ತಂಡದ ವ್ಯವಸ್ಥಾಪಕಿಯರಾಗಿದ್ದರು.
ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ, ಸಮಸ್ತ ಪಾಲಕ ಬಂಧುಗಳು, ಶಾರದಾ ಹಿರಿಯ ವಿದ್ಯಾರ್ಥಿ/ನಿಯರು, ಗ್ರಾಮದ ಎಲ್ಲಾ ನಾಗರಿಕರು, ಶಿಕ್ಷಕ/ಶಿಕ್ಷಕಿಯರ ವೃಂದ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ತೀರ್ಥ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಪರವಾಗಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಡಿ.ಬಿ ನದಾಫ ರವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.