*ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಬೈಕ್ ಸವಾರ ಸಾವು*
ಗೋಕಾಕ : ತನ್ನ ಬೈಕ್ ಮುಂದೆ ಚಲಾಯಿಸುತಿದ್ದ ಬೈಕಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಸ್ಥಳದಲ್ಲಿಯೆ ಸಾವಿಗಿಡಾದ ಘಟನೆ ಗೋಕಾಕ ತಾಲೂಕಿನ ಹೊರಲವಲಯದ ದುಂಡಾನಟ್ಟಿ ಕ್ರಾಸ್ ಬಳಿ ನಡೆದಿದೆ.
ಗೋಕಾಕದಿಂದ ಅಜ್ಜನಕಟ್ಟಿ ಗ್ರಾಮಕ್ಕೆ ತೆರಳುತಿದ್ದ ತಳನಟ್ಟಿ ಗ್ರಾಮದ ಬರಮಣ್ಣ ಇಡಬಿ ( 30) ಎಂಬ ಯುವಕ ವೇಗವಾಗಿ ಬೈಕ ಚಲಾಯಿಸುವ ವೇಳೆ ತನ್ನ ಮುಂದೆ ಚಲಯಿಸುತಿದ್ದ ಬೈಕಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇನ್ನು ಮುಂದಿನ ಬೈಕ್ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಸ್ಥಳಿಯ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ.ಸುದ್ದಿ ತಿಳಿದ ಗೋಕಾಕ ಗ್ರಾಮಿಣ ಪೊಲಿಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶಿಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Fast9 Latest Kannada News