ನಾಳೆ ದಿನ ಬೃಹತ್ ಲಸಿಕಾ ಮೇಳ ಸದುಪಯೋಗಪಡೆದುಕೊಳ್ಳಲು ಪ್ರಕಾಶ ಹೊಳೆಪ್ಪಗೋಳ ಕರೆ
ನಾಳೆ ದಿನಾಂಕ *17-09-2021*ರಂದು ಕರ್ನಾಟಕ ಸರಕಾರವು ಹಮ್ಮಿಕೊಂಡಿರುವ *ಬೃಹತ್ ಕೋವಿಡ್ ಲಸಿಕೆ ಅಭಿಯಾನ* ದ ಪ್ರಯುಕ್ತ ತಾಲೂಕಿನಲ್ಲಿ ಸುಮಾರು 20000 ಗಳಷ್ಟು dose ಲಸಿಕೆ ನೀಡಲು ಗುರಿ ನಿಗದಿಪಡಿಸಲಾಗಿದೆ.
ಗೋಕಾಕ ತಾಲೂಕಿನಲ್ಲಿ 105 ಕೇಂದ್ರಗಳಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಎಲ್ಲಾ ಶಾಲಾ ಮಕ್ಕಳ ಪಾಲಕರು ಲಸಿಕೆಯನ್ನು ಪಡೆದುಕೊಳ್ಳಬೇಕಾಗಿದೆ. *ಹಾಗೂ* ಯಾದಿಯಲ್ಲಿರುವ ಪ್ರತಿ ಲಸಿಕಾ ಕೇಂದ್ರಕ್ಕೆ ಡಾಟಾ ಎಂಟ್ರಿ ಕೆಲಸಕ್ಕೆ ಪಂಚಾಯಿತಿ ಸಿಬ್ಬಂದಿ ಹಾಗೂ ನುರಿತ ಶಿಕ್ಷಕ ಸಿಬ್ಬಂದಿಯನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಬೇಟಿ ಕೊಟ್ಟು ಅರ್ಹ ವ್ಯಕ್ತಿಗಳನ್ನು ಕರೆತಂದು ಲಸಿಕೆ ಪಡೆಯಲು ಪೂರಕವಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಕಾರ್ಯಕ್ರಮ ಯಶಸ್ವಿಗೊಳಿಸಲು ತಾಲೂಕಿನಾದ್ಯಂತ ಸೆಕ್ಟರ್ ಆಫೀಸರ್ ಗಳು, ಪಿಡಿಒರವರನ್ನು ನಿಯೋಜನೆ ಮಾಡಲಾಗಿದ್ದು.
ಸಾರ್ವಜನಿಕರು ತಪ್ಪದೇ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಕಾಶ ಹೊಳೆಪ್ಪಗೋಳ ತಹಶೀಲ್ದಾರ್ ಗೋಕಾಕ ಈ ಮೂಲಕ ತಿಳಿಸಿದ್ದಾರೆ.
Fast9 Latest Kannada News