ಕೊರಾನಾ ಸಮಯದಲ್ಲಿ ಉತ್ತಮ ಸೇವೆ, ಜಾಗೃತಿ,ಚಿಕಿತ್ಸೆ ನೀಡಿದ ಡಾ: ಸ್ವಾಮಿಗೆ ಗ್ರಾಮಸ್ಥರಿಂದ ಸನ್ಮಾನ
ಮಹಾಮಾರಿ ಕೊರಾನಾಗೆ ವೈದ್ಯರಿಂದ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಕಂಡು ಕಾಣಬಾರದಷ್ಟು ಸಾವುಗಳನ್ನು ನೋಡಿದ್ದೇವೆ,ಇನ್ನೂ ಕೂಡ ಪ್ರತಿ ದಿನ ನೋಡುತ್ತಾ ಇದ್ದೇವೆ,
ಆದರೆ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲವು ವೈದ್ಯರಂತೂ ಕೊರೊನಾ ಸೊಂಕಿತರ ಚಿಕಿತ್ಸೆ ನೀಡಲು ಹಿಂದೇಟು ಹಾಕಿ ಕೇವಲ ಹಣ ಗಳಿಸುವುದಕ್ಕೆ ಮುಂದಾಗಿದ್ದು ದಿನಾಲು ನಡೆಯುತ್ತಿರುವ ಸುದ್ದಿ,
ಆದರೆ ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ಡಾ: ಸ್ವಾಮಿ ಎನ್ನುವವರು ಕೇವಲ ಬಿರಡಿ ಗ್ರಾಮದಲ್ಲಿ ಅಷ್ಟೆ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೆ ಮನೆಯಲ್ಲಿ ಕೊರೊನಾ ಸೊಂಕಿತರು ಇದ್ದಲ್ಲಿ ಅಂತವರ ಮನೆಗೆ ಹೋಗಿ ದೈರ್ಯ ತುಂಬಿ, ತಿಳುವಳಿಕೆ ನೀಡಿ, ತಮ್ಮ ಕೈಲಾದಷ್ಟು ಚಿಕಿತ್ಸೆ ನೀಡಿ ಜೀವ ಉಳಿಸಿ ವೈದ್ಯೋ ನಾರಾಯಣ ಹರಿ ಎಂಬುದು ನಿಜವೆಂದು ತೊರಿಸುವದರ ಜೊತೆಯಲ್ಲಿ ಮಾನವಿಯತೆ ಮೆರೆದಿದ್ದಾರೆ,
ಇವರ ಈ ಸೇವೆಯನ್ನು ಗುರುತಿಸಿದ ಬಿರಡಿ ಗ್ರಾಮದ ನಿಂಗಪ್ಪಾ ಬೆಂಡೆ,ಶಂಕರ ಪಾಟೀಲ,ಶಂಕರ ಗಡಕರಿ,ಕೆಂಪಣ್ಣಾ ಮೈಶಾಳೆ,ಬಸಪ್ಪಾ ಬೆಂಡೆ,ಮಹಾದೇವ ಮುಗಳೆ,ಮಹಾದೇವ ಇಟೆಕರಿ,ಮಮುದು ಮುಲ್ಲಾ ಹಾಗೂ ಇನ್ನೂಳಿದ ಗ್ರಾಮಸ್ಥರು ಡಾ: ಸ್ವಾಮಿಗೆ ಸನ್ಮಾನಿಸಿ ಇದೆ ರೀತಿ ತಮ್ಮ ಸೇವೆ ಮುಂದುವರೆಸಲು ಹಾರೈಸಿದ್ದಾರೆ.