ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಶ್ರಾವಣ ಮಾಸದ ಜಾತ್ರಾ ಸಂಭ್ರಮ
ಸಪ್ತಸಾಗರ: ನಾವುಗಳು ಜಾತ್ರಾ ಮಹೋತ್ಸವಗಳನ್ನು ಮಾಡಿದರೆ ಸಾಲದು. ಕಾಯಕದಲ್ಲಿ ದೇವರುಗಳನ್ನು ಕಾಣಬೇಕು. ಮಹಾತ್ಮರನ್ನು ಭಕ್ತಯಿಂದ ಕಾಣಿದಾದ ಮುಕ್ತಿ ದೊರೆಯುತ್ತದೆಂದು ಡಾ. ಪದ್ಮಜಿತ ನಾಡಗೌಡರ ಕರೆ ನೀಡಿದರು.
ಅವರು ಸಪ್ತಸಾಗರ ಗ್ರಾಮದ ಶ್ರಾವಣ ಮಾಸದ ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಪವಾಡ ಪುರಷ್ಯರಾದ ಶ್ರೀ ಯಲ್ಲಾಲಿಂಗ ಮಹಾರಾಜರ ಭಾವಚಿತ್ರಕ್ಕೆ ಹಾಗೂ ಸಮಾಧಿಗೆ ಪುಷ್ಪವನ್ನು ಹಾಕಿ ಮಾತನಾಡುತ್ತಾ. ವೇಧ ವ್ಯಾಸರು ಕಾಲದಲ್ಲಿ ಅತ್ಯಂತ ಹೆಸರುವಾಸಿಯಾದ ಸಪ್ತಸಾಗರ ಗ್ರಾಮದಲ್ಲಿ ವಿಶೇಷವಾಗಿದ್ದೆ.
ಈ ಗ್ರಾಮದ ಬಗ್ಗೆ ಮುಂಬರುವ ದಿನಗಳಲ್ಲಿ ಸಪ್ತಸಾಗರ ಗ್ರಾಮದ ಬಗ್ಗೆ ಪಿ ಎಚ್ ಡಿ ಮಾಡುವವರಿಗೆ ಸಹಾಯ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದರು.
ಸಂತರು ನಮಗೆ ನೀಡಿದ ಮಾರ್ಗದರ್ಶನದಲ್ಲಿ ನಾವುಗಳು ಶ್ರಾವಣ ಮಾಸದಲ್ಲಿ ಸಂತರ ಪ್ರವಚನ ಹಾಗೂ ಜ್ಞಾನವನ್ನು ಪಡೆದುಕೊಳಬೇಕು.
ಶ್ರೀ ಯಲ್ಲಾಲಿಂಗ ಅಜ್ಜನವರು ನಮಗೆ ದೊರಕ್ಕಿಂದು ನಮ್ಮ ಭಾಗ್ಯ ಸಂತರು ಯಾವುದೇ ಜಾತಿ ಜನಾಂಗಕ್ಕೆ ಸೇರಿರುವುದಿಲ್ಲ ಅವರುಗಳಿಗೆ ಗುರುವಿನ ಸ್ಥಾನದಲ್ಲಿರುತ್ತಾರೆಂದು ಪ್ರಾಸ್ತಾವಿಕವಾಗಿ ಸಂಜಯ ನಾಡಗೌಡರ ಹೇಳಿದರು.
ಈ ಸಂದರ್ಭದಲ್ಲಿ ಡಾ.ಅಪ್ಪಾಸಾಬ ನಾಡಗೌಡರ,ಆರ್ ಎ ಪಾಟೀಲ,ನಾರಾಯಣ ಗೊರ್ಪಡೆ,ಅಶೋಕ ಐಗಳಿ,ಪರಶುರಾಮ ಕೊಳೆಕರ,ರಮೇಶ ತರಾಳ,ರಾಜು ಪಾಟೀಲ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ,ರಮೇಶ ವಾಘಮೊಡೆ,ರಾಮು ಪೂಜಾರಿ,ಇಸ್ಮಾಯಿಲ ಕರಿಸಾಬು,ಹಾರೂನ ಮುಲ್ಲಾ,ಮಹೀಂದ್ರ ಸುಲಾರೆ,ಅಪ್ಪಾಸಾಬ ಕಾಂಬಳೆ,ಕಾಸಪ್ಪ ಕಾಂಬಳೆ,ರಾಮು ಗಸ್ತಿ,ಯಲ್ಲಪ್ಪ ಕಾಂಬಳೆ,ಭೀಮಸಿ ಸುಲಾರೆ, ಹಾಗೂ ಗ್ರಾಮದ ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.