ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ
ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ ಶಕ್ತಿ ಯಾರಿಗೂ ಇಲ್ಲ, ಕಾಂಗ್ರೆಸ್‌ಗೆ ತಾಕತ್ತಿದ್ದರೆ RSS ಮತ್ತು ಬಜರಂಗದಳ ನಿಷೇಧ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ, ಡಿಸಿಎಂ ಹಾಗು ನೂತನ ಸಚಿವರು ಮಾತಾಡಿದ್ದನ್ನು ಗಮನಿಸಿದರೆ, ಇವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಅದನ್ನ ಎದುರಿಸಲಿಕ್ಕೆ ನಾವು ಸಿದ್ಧರಿದ್ದೇವೆ ಎಂದು ಬೊಮ್ಮಾಯಿ ಸವಾಲು ಹಾಕಿದ್ದಾರೆ.
Fast9 Latest Kannada News