2D ಮಿಸಲಾತಿಯನ್ನು ಪಂಚಮಸಾಲಿಗಳು ತಿರಸ್ಕರಿಸುತ್ತೇವೆ : ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿಗಳು
ಬೆಳಗಾವಿ: ಸಿಎಂ ಬೋಮ್ಮಾಯಿ
ಅವರು ತಾಯಿ ಮೇಲೆ ಆಣೆ ಕೊಟ್ಟು
ಡಿಸೆಂಬರ್29 ರಂದು ಮೀಸಲಾತಿ
ಘೋಷಣೆ ಮಾಡಿದ್ರು ಆದ್ರೆ 2 ಡಿ
ಮೀಸಲಾತಿ ಯನ್ನ ಪಂಚಮಸಾಲಿ
ಸಮಾಜ ತಿರಸ್ಕರಿಸುತ್ತೆವೆ. ಸಿಎಂ 24
ಗಂಟೆಯಲ್ಲಿ 2ಎ ಮೀಸಲಾತಿ
ಕೊಡ್ತಿರೋ ಇಲ್ಲವೋ ಅನ್ನೋದನ್ನ
ಸ್ಪಷ್ಟ ಪಡಿಸಬೇಕು ಎಂದು
ಕೂಡಲಸಂಗಮ ಬಸವ
ಜಯಮೃತ್ಯುಂಜಯ ಸ್ವಾಮೀಜಿ
ಹೇಳಿದ್ದಾರೆ.
ಬೆಳಗಾವಿ ಗಾಂಧಿ ಭವನದಲ್ಲಿ ಮಹತ್ವದ ರಾಜ್ಯ ಕಾರ್ಯಕಾರಣಿ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳು
ಜನವರಿ 12 ರ ಒಳಗಾಗಿ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕು.
ಘೋಷಣೆ ಮಾಡದಿದ್ದರೆ ಜನವರಿ 13 ರಂದು ಹಾವೇರಿಯ ಸಿಎಂ ಮನೆ ಮುಂದೆ ಒಂದು ದಿನದ ಉಗ್ರ ಹೋರಾಟ ಮಾಡ್ತಿವಿ, ಪಂಚಮಸಾಲಿ
ನಡೆ ಹಾವೇರಿ ಕಡೆ ಹೋರಾಟಕ್ಕೆ
ಸ್ವಾಮೀಜಿ ಕರೆ ನೀಡಿದ್ದಾರೆ.
ಸಚಿವ ಸಂಪುಟದ ಸಭೆಯನ್ನು ನಾವು
ತಿರಸ್ಕಾರ ಮಾಡ್ತಿವಿ, ಹಾವೇರಿಯಲ್ಲಿ
30 ರಿಂದ 40 ಸಾವಿರಕ್ಕೂ ಅಧಿಕ ಜನರೊಂದಿಗೆ ಹೋರಾಟ ಮಾಡ್ತಿವಿ,
ಅವತ್ತು ಘೋಷಣೆ ಮಾಡದಿದ್ದರೆ
ಮುಂದಿನ ಹೋರಾಟವನ್ನ
ಹಾವೇರಿಯಲ್ಲಿ ಘೋಷಣೆ ಮಾಡ್ತಿವಿ
ಎಂದು ಸ್ವಾಮೀಜಿ ತಿಳಿಸಿದರು
ಇದು 2023 ರ ಚುನಾವಣೆ ಮೇಲೆ
ಪರಿಣಾಮ ಬೀರಲಿದೆ, ಪಂಚಮಸಾಲಿ
ಸಮಾಜ ಎಲ್ಲಾ ತೀರ್ಮಾನಕ್ಕೆ
ಗಟ್ಟಿಯಾಗಿದೆ. ನಾವು 2 ಎ,ಮೀಸಲಾತಿಯಲ್ಲಿ ಇದ್ದ ಸೌಲಭ್ಯ
ಕೊಡಬೇಕು ಈಗ ಸರ್ಕಾರದ 2ಡಿ
ಮೀಸಲಾತಿ ಗೊಂದಲಕ್ಕೆ
ಕಾರಣವಾಗಿದೆ ಎಂದು ತಿಳಿಸಿದರು.