ವಿಜಯಪುರ: ವಿಜಯಪುರದ ಕೆಲವೆಡೆಗಳಲ್ಲಿ ಭೂಕಂಪದ ಅನುಭವವಾಗಿದ್ದು, ಭಯಭೀತರಾದ ಜನರು ಮನೆಯಿಂದ ಹೊರಗೋಡಿಬಂದ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಮನಗೂಳಿ, ಉಕ್ಕಲಿ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದ್ದು, ಕೆಲವು ಮನೆಗಳ ಗೋಡೆಯಲ್ಲಿ ಬಿರುಕುಬಿಟ್ಟಿದೆ. ಮನೆಯ ಮೇಲ್ಛಾವಣಿಯಿಂದ ಮಣ್ಣು ಉದುರಿ ಬಿದ್ದಿದೆ. ಭಯಗೊಂಡ ಗ್ರಾಮಸ್ಥರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ
Fast9 Latest Kannada News