*ಡೀಪೋದಲ್ಲಿ ನಿಂತಲ್ಲಿ ನಿಂತ ಬಸ್ಸುಗಳು,ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿ*
ಗೋಕಾಕ :ತಮ್ಮ ಬೇಡಿಕೆಗಳಿಗಾಗಿ ರಾಜ್ಯಾದಂತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೋಕಾಕದಲ್ಲಿಯೂ ಕೂಡ ಮೂರನೆ ದಿನಕ್ಕೆ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಂದುವರೆದಿದೆ,
ಈ ಮುಷ್ಕರದಿಂದಾಗಿ ಗೋಕಾಕದ ಬಸ್ ಡಿಪೋದಲ್ಲಿ ನೂರಾರು ಬಸಗಳು ನಿಂತಲ್ಲೆ ನಿಂತಿವೆ ಇದರಿಂದ ಪರೂರಿಗೆ ತೆರಳಬೇಕಾದ ಸಾರ್ವಜನಿಕರು ಪರದಾಡುತಿದ್ದು ತಮ್ಮ ಗ್ರಾಮಕ್ಕೆ ತೆರಳಲು ಖಾಸಗಿ ಮೊರೆ ಹೋಗುತಿದ್ದಾರೆ ,ಇನ್ನು ಗೋಕಾಕ ಡಿಪೋದಲ್ಲಿ ನೂರಾರು ಬಸ್ಸುಗಳು ನಿಂತಲ್ಲೆ ನಿಂತಿದ್ದರೆ, ನಿಲ್ದಾಣದಲ್ಲಿ ಮಾತ್ರ ಮುಷ್ಕರ ಕಾರಣದಿಂದ ಬಸ್ ಇಲ್ಲದೆ ಬೀಕೊ ಅನ್ನುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
Fast9 Latest Kannada News