*ಮರಾಕುಡಿ ಗ್ರಾಮದ ಅಬಿವೃದ್ದಿಗಾಗಿ ಅಭ್ಯರ್ಥಿಗಳ ಅವಿರೋಧ ಆಯ್ಕೆ*
ಗ್ರಾಮ ಪಂಚಾಯತ ಚುನಾವಣೆ ಹತ್ತಿರ ಬಂದರೆ ಸಾಕು ಕುಟುಂಬದವರ ಮಧ್ಯೆ ಚುನಾವಣಾ ಭರಾಟೆ ಜೋರಾಗಿಯೇ ಇರುತ್ತದೆ. ಗ್ರಾಮದಲ್ಲಿ ನಾನು ನೀನು ಎಂದು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಮುಂದಾಗುತ್ತಾರೆ. ಗ್ರಾಮದಲ್ಲಿ ತಮ್ಮದೆ ಹಿಡಿತ ಸಾಧಿಸಲು ಗ್ರಾಮ ಪಂಚಾಯತಿ ಚುನಾವಣೆ ಒಂದು ಅಡಿಪಾಯ ಆಗುತ್ತೆ . ಬಿರುಸಿನ ಫೈಟ್ ನಡೆಯುವ ಕಾಲದಲ್ಲಿ ಇಲ್ಲೊಂದು ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆದು ಜಿಲ್ಲೆಯಲ್ಲಿ ಗಮನ ಸೆಳೆದಿರುವುದು ವಿಶೇಷವಾಗಿದೆ.
ಇಂತಹ ಗ್ರಾಮ ಪಂಚಾಯಿತಿ ಇರೋದು ಬೆಳಗಾವಿ ಜಿಲ್ಲೆಯಲ್ಲಿ. ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮರಾಕುಡಿ ಗ್ರಾಮದಲ್ಲಿ ಮೂರು ಅಭ್ಯರ್ಥಿಗಳು ರಾಯಬಾಗ ತಾಲೂಕಿನ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಅಧ್ಯಕ್ಷರಾದ ಮಲ್ಲಪ್ಪ ಅಂಗಡಿ ಹಾಗೂ ಗ್ರಾಮದ ಗಣ್ಯರ ಸಹಕಾರದಿಂದ
ಅವಿರೋಧ ಆಯ್ಕೆಯಾಗಿದ್ದಾರೆ.
ಕಪ್ಪಲಗುದ್ದಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 21 ಸದಸ್ಯರುಗಳ ಸ್ಥಾನಗಳಿದ್ದು. ಅರದಲ್ಲಿ ಮರಾಕುಡಿ ಗ್ರಾಮದ ವಾರ್ಡ ನಂ 3 ರಲ್ಲಿ ಮೂವರು ಅಭ್ಯರ್ಥಿ.
ಸುಲ್ತಾನಪೂರ ಗ್ರಾಮದಲ್ಲಿ 2 ವಾರ್ಡ ಹೋದಿದ್ದು
ವಾರ್ಡ 6 .ರಲ್ಲಿ ನಾಲ್ವರು ಅಭ್ಯರ್ಥಿಗಳು. ವಾರ್ಡ 7 ರಲ್ಲಿ ಇಬ್ಬರು ಅಭ್ಯರ್ಥಿಗಳು
ಕಪ್ಪಲಗುದ್ದಿ ಗ್ರಾಮದಲ್ಲಿ 4 ವಾರ್ಡಗಳಿಂದು ಅದರಲ್ಲಿ ವಾರ್ಡ ನಂ 1ಹಾಗೂ 2 ರಲ್ಲಿ ಮೂವರು ಅಭ್ಯರ್ಥಿ
ವಾರ್ಡ ನಂ 4 ರಲ್ಲಿ ನಾಲ್ವರು ಅಭ್ಯರ್ಥಿಗಳು. ವಾರ್ಡ ನಂ 5 ರಲ್ಲಿ 2 ಅಭ್ಯರ್ಥಿಗಳು
ಒಟ್ಟು 7 ವಾರ್ಡ ಹೊಂದಿರುವ ಈ ಗ್ರಾಮಯ ಪಂಚಾಯತಿವಾಗಿದ್ದೆ.
ಮರಾಕುಡಿ ಗ್ರಾಮದ ರೈತ ಪರ ಸಂಘಟನೆ ಬೆಂಬಲಿತ ಅಭ್ಯರ್ಥಿಯ ವಾರ್ಡ ನಂಬರ 3 ರಲ್ಲಿ 1) ತಮ್ಮಣ ಭೀಮಪ್ಪ ಪಾಟೀಲ. 2) ಕೆಂಪಣ್ಣ ಗುರುಪಾದ ಬಳಿಗಾರ. 3) ಸಾವಿತ್ರಿ ಲಕ್ಕಪ್ಪ ಸಪ್ತಸಾಗರ. ಹಾಗೂ
ಕಪ್ಪಲಗುದ್ದಿ ಗ್ರಾಮದ ವಾರ್ಡ ನಂ 4 ರಲ್ಲಿ ಸುರ್ವಣಾ ಮಹಾಲಿಂಗ ಕೇರಿ. ಮತ್ತು ವಾರ್ಡ 5 ರಲ್ಲಿ ಕೆಂಪಣ್ಣ ಕುರನಿಗ. ಶ್ರೀಮತಿ ಚಂದ್ರವ್ವ ಸಿ ಯಡ್ರಾಂವಿ
ಇವರುಗಳು
ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು
ಕಪ್ಪಲಗುದ್ದಿ ಹಾಗೂ ಸುಲ್ತಾನಪುರದ ಇನ್ನುಳಿದ 15 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆಂದು ಚುನಾವಣೆ ಅಧಿಕಾರಿ ಹೇಳಿದರು.
ಇವರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮರಾಕುಡಿ ಹಾಗೂ ಕಪ್ಪಲಗುದ್ದಿ
ಗ್ರಾಮದ ಗುರು ಹಿರಿಯರು ಆಯ್ಕೆ ಮಾಡಿದ ಎಲ್ಲ ಮತದಾರರಿಗೆ ಇವರು ಕೃತಜ್ಞತೆ ಸಲ್ಲಿಸಿದ್ದಾರೆ. ಕಪ್ಪಲಗುದ್ದಿ. ಮರಾಕುಡಿ ಗ್ರಾಮದ ಹಲವಾರು ಜ್ವಲಂತ ಸಮಸ್ಯೆಗಳು ಹಾಗೂ ಗ್ರಾಮದ ಎಲ್ಲಾ ಜನರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.