ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರಾನಾ ಲಸಿಕೆಗೆ ಪಟ್ಟಣ ಪಂಚಾಯತ ಅಧ್ಯಕ್ಷರಿಂದ ಚಾಲನೆ
ಚಿಂಚಲಿ: ಕೊರೊನಾ ಹಾವಳಿ ತಡೆಗಟ್ಟಲು ಲಸಿಕೆ ಸಿಗುತ್ತಿರುವುದು ನಮ್ಮೆಲ್ಲರಹೆಮ್ಮೆ ಕೋವಿಡ್ ಬಂದರೂ ಹೆದರುವ ಅವಶ್ಯಕತೆ ಇಲ್ಲ ಧೈರ್ಯದಿಂದ ಗೆದ್ದು ಎದುರಿಸಬೇಕು. ಕೋವಿಶಿಲ್ಡ್ ವ್ಯಾಕ್ಸಿನ್ ಲಸಿಕೆಯನ್ನು ರಾಜ್ಯಾದ್ಯಂತ ವೈದ್ಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು,ಕೊರೊನಾ ವಾರಿಯರ್ಸ್ಗಳಿಗೆ ನೀಡುತ್ತಿದ್ದು ಅದೇ ರೀತಿ ಇವತ್ತು ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಕೋವಿಶಿಲ್ಡ್ ವ್ಯಾಕ್ಸಿನ್ ಲಸಿಕೆಯ ಬಂದಿರುವುದರಿಂದ ಸಂತಸವಾಗಿದೆ ಎಂದು ಪಟ್ಟಣ ಪಂಚಾಯತ ಅಧ್ಯಕ್ಷ ಮಹಾದೇವ ಪಡೋಳಕರ ಹೇಳಿದರು.
ಅವರು ಚಿಂಚಲಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಶಿಲ್ಡ್ ವ್ಯಾಕ್ಸಿನ್ ಲಸಿಕೆಗೆ ಸ್ವಾಗತಿಸಿ ಕೊಠಿಗಳಿಗೆ ಚಾಲನೆ ನೀಡಿ ಮಾತನಾಡುತ್ತಾ ಆರೋಗ್ಯ ಕೇಂದ್ರ ಮೊದಲ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದು ಆರೋಗ್ಯ ಇಲಾಖೆಯಿಂದ ಸಂದೇಶದ ಮಾಹಿತಿ ಬಂದ ಬೆನ್ನಲ್ಲೆ ಆಸ್ಪತ್ರೆಗೆ ಬಂದು ಲಸಿಕೆಯನ್ನು ಪಡೆದುಕೊಳ್ಳಬೇಕು ಮತ್ತು. ಜನರು ಯಾವುದೇ ರೀತಿ ಭಯ ಪಡಬೇಕಿಲ್ಲ ಗರ್ಭಿಣಿ ಸ್ತ್ರೀಯರು, ವಯೋವೃದ್ದರು ಮತ್ತು ಹದಿನೆಂಟು ವರ್ಷ ಒಳಗಿನವರು ಸದ್ಯಕ್ಕೆ ಲಸಿಕೆ ಪಡೆಯುವಂತಿಲ್ಲ ಸದ್ಯ ಯಾವುದೇ ಅಡ್ಡ ಪರಿಣಾಮ ಇಲ್ಲ ಆದ್ದರಿಂದ ಭಯಮುಕ್ತವಾಗಿ ಲಸಿಕೆ ಪಡೆಯಬಹುದು ಎಂದು ಪಟ್ಟಣ ಪಂಚಾಯತ ಅಧ್ಯಕ್ಷ ಮಹಾದೇವ ಪಡೋಳಕರ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಜಾಕೀರ ತರಡೆ, ತಮ್ಮಣ್ಣ ವಡ್ಡರ, ಸಭಾಜೀ ಶಿಂಧೆ, ವಿಶ್ವನಾಥ ಪಾಟೀಲ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆಶಾ ಕಾರ್ಯಕರ್ತರು, ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು
ವರದಿ: ಆನಂದ ಕೋಳಿಗುಡ್ಡೆ. ಚಿಂಚಲಿ