ನನ್ನ ಎಳಿಗೆ ಸಹಿಸಲಾಗದವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ: ಸಚಿವ ರಮೇಶ ಜಾರಕಿಹೊಳಿ.
ಮದ್ಯಾನ್ಹದಿಂದ ದೃಶ್ಯ ಮಾಧ್ಯಮಗಳಲ್ಲಿ ಭೀತ್ತರವಾಗಿದ್ದನ್ನು ಇನ್ನೊಬ್ಬರಿಂದ ಕೇಳಿದ ತಕ್ಷಣ ನಾನು ಶಾಕ್ ಆದೆ,2019 ರಲ್ಲಿಯೂ ಉಪಚುನಾವಣೆಯ ಸಮೀಪದಲ್ಲಿ ನನ್ನ ವಿರುದ್ದ ಇದೆ ರೀತಿ ಷಡ್ಯಂತ್ರ ರಚಿಸಿದ್ದರು, ಆದರೆ ಅದಕ್ಕೆ ನಮ್ಮ ಕ್ಷೇತ್ರದ ಜನತೆ ಮತ್ತೆ ಗೆಲ್ಲಿಸುವ ಮೂಲಕ ನಾವು ಎನೆಂದು ತೊರಿಸಿದ್ದಾರೆ, ಈಗ ಮತ್ತೆ ಉಪ ಚುನಾವಣೆ ಸಮೀಪ ಇರುವುದರಿಂದ ಮತ್ತೆ ಹೇಗಾದರೂ ಮಾಡಿ ನನಗೆ ತೇಜೊವದೆ ಮಾಡಲು ನನಗೆ ಗೊತ್ತಿಲ್ಲದಂತಹ ಸಿಡಿಯನ್ನು ಬೀಡುಗಡೆ ಮಾಡಿದ್ದಾರೆ, ಆ ಸಿಡಿಯಲ್ಲಿ ಇರುವವರು ಮತ್ತು ಬಿಡುಗಡೆ ಮಾಡಿದ ವ್ಯಕ್ತಿ ಯಾರೆಂಬುದೆ ಗೊತ್ತಿಲಾ ಅದಕ್ಕಾಗಿಯೆ ನಾನು ನೇರವಾಗಿ ಭೀತ್ತರವಾಗುತ್ತಿರುವ ಖಾಸಗಿ ಸುದ್ದಿ ವಾಹಿನಿಗಳೊಂದಿಗೆ ಮಾತನಾಡಲು ಬಂದಿದ್ದೇನೆ, ಅವರ ಸಿಡಿ ಬಗ್ಗೆ ಹಾಗೂ ಯುವತಿಯ ಬಗ್ಗೆ ನನಗೆ ಏನು ಗೊತ್ತಿಲ್ಲಾ ರಾಜಕೀಯ ಬೇರೆ ಆದರೆ ನಮ್ಮ ಕುಟುಂಬ ರಾಜ್ಯದಲ್ಲಿ ಪ್ರತಿಷ್ಟಿತ ಕುಟುಂಬವಾಗಿ ಹೆಮ್ಮರವಾಗಿ ಬೆಳೆದಿದೆ. ಮಾದ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಕೇಳಿ ನನಗೆ ಆಶ್ಚರ್ಯವಾಗಿದೆ.
ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ
ಇದರ ಬಗ್ಗೆ ಸಂಪೂರ್ಣ ತನಿಖೆಯಾಗಲು ಹೇಳುತ್ತೇನೆಂದರು.ನನ್ನಿಂದ ತಪ್ಪಾಗಿದ್ದರೆ ತನಿಖೆಯಾಗಲಿ ಆಗಲೂ ತಪ್ಪಿದ್ದರೆ ಪಕ್ಷ ಯಾವುದೇ ಕ್ರಮ ತಗೆದುಕೊಳ್ಳಲಿ ಅದಕ್ಕೆ ನಾನು ಸಿದ್ದನಿದ್ದೇನೆ ಎಂದು ನಾನು ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಮಾತನಾಡುತ್ತೇನೇ ಎಂದು ಹೇಳಿದರು .
ವಿರೋಧಿಗಳು ಈಗ ಬೆಳಗಾವಿ ಲೋಕಸಭಾ ಉಪ ಚುನಾವಣೆ ಬಂದಿದ್ದು ಮತ್ತೆ ನನ್ನ ಹೆಸರು ಕೆಡಿಸಲಿಕ್ಕೆಇ ರೀತಿ ರಾಜಕೀಯ ಷ್ಯಡ್ಯಂತ್ರ ರೂಪಿಸಿದ್ದಾರೆ ಎಂದು ಸ್ವಷ್ಟನೆ ನೀಡಿದರು.
Fast9 Latest Kannada News