*ಅಮಿಷವೊಡ್ಡಿ ಇನ್ನೊಬ್ಬರಿಂದ ಸ್ವಚ್ಚತಾ ಮಾಡಿಸುತ್ತಿರುವ ಪೌರಕಾರ್ಮಿಕರು : ಕಣ್ಮುಚ್ಚಿ ಕುಳಿತ ಅಧಿಕಾರಿಗಳು*
ಇವತ್ತು ನಗರ,ಪಟ್ಟಣ, ಬೀದಿಗಳು ಸ್ವಚ್ಚವಾಗಿವೆಯೆಂದರೆ ಅದಕ್ಕೆ ಕಾರಣ ಪೌರಕಾರ್ಮಿಕರು, ಯಾಕೆಂದರೆ ತಮ್ಮ ಆರೋಗ್ಯ ಗಮನಿಸದೆ,ನಸುಕಿನ ಜಾವದಲ್ಲಿ ಎದ್ದು ತಮ್ಮ ಗ್ರಾಮದ ಜನತೆ ಅರೋಗ್ಯವಾಗಿರಲೆಂದು ಸ್ವಚ್ಚ ಮಾಡುತ್ತಾರೆ, ಅದಕ್ಕಂತೆ ಅವರಿಗೆ ಇವತ್ತು ವಿಶೇಷ ಗೌರವವಿದೆ,
ಆದರೆ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಕೆಲ ಪೌರಕಾರ್ಮಿಕರು ತಮಗೆ ಕೆಲಸ ಮಾಡಲಿಕ್ಕೆ ಅಸಹ್ಯ ಪಟ್ಟೋ ಅಥವಾ ನಸುಕಿನ ಜಾವದಲಿ ನಾವೇಕೆ ಎದ್ದು ಇನ್ನೊಬ್ಬರ ಮನೆ ಮುಂದಿನ ಕಸ ಸ್ವಚ್ಚ ಮಾಡಲಿ ಎಂಬ ಮನಸ್ಸೋ ಇಲ್ಲದಿದ್ದರೆ ನನಗೆ ಬರುವ ದೊಡ್ಡ ಮೊತ್ತದ ವೇತನದಲ್ಲಿನ ಸ್ವಲ್ಪ ಹಣ ಇನ್ನೊಬ್ಬರಿಗೆ ಕೊಟ್ಟು ಸ್ವಚ್ಚ ಮಾಡಿಸದರಾಯಿತು ಎಂಬ ಭಾವನೆಯಿಂದಲೋ ಸ್ವಚ್ಚತಾ ಮಾಡಲಿಕ್ಕೆ ಹಿಂದೇಟು ಹಾಕುತ್ತಿರುವುದು ತಿಳಿದುಬರಬೇಕಾಗಿದೆ,
ಕೆಲವು ಪೌರಕಾರ್ಮಿಕರಿಗೆ ದಿನಕ್ಕೆ 30 ರೂ,ಯಂತೆ ನಿಡಿ ತಮ್ಮ ಕೆಲಸವನ್ನು ಇನ್ನೊಬ್ಬರಿಂದ ರಾತ್ರಿ 1:00 ಗಂಟೆಗೆ ಮಾಡಿಸುತಿದ್ದಾರೆ, ಇದು ಇಲ್ಲಿನ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಕಣ್ಮುಚ್ಚಿ ಕುಳಿತಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ದಿನಾಲು ಅವರ ಹಾಜರಿ ತೆಗೆದುಕೊಳ್ಳುತ್ತಿರುವುದು ಹೇಗೆ, ಯಾಕೆ ಅವರಿಗೂ ಕೂಡ ಕೆಲಸ ಮಾಡುವವರು ಅಧಿಕಾರಿಗಳಿಗೂ ಎನಾದರೂ ಕೊಡುತ್ತಾರಾ ಎಂದು ಕೊಣ್ಣೂರಿನ ಪ್ರಜ್ಞ್ಯಾವಂತ ನಾಗರಿಕರು ಮಾತನಾಡುತಿದ್ದಾರೆ,
ಇದರಿಂದ ಸಂಬಂದಪಟ್ಟ ಅಧಿಕಾರಿಗಳಿಗೆ ಪೌರಕಾರ್ಮಿಕರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂದು ಎದ್ದು ಕಾಣುತ್ತಲಿದೆ, ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ತಮ್ಮ ಕೆಲಸವನ್ನು ಬೇರೆಯೊಬ್ಬರಿಂದ ಮಾಡಿಸುವ ಕೈಲಾಗದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ನಿಷ್ಟೆಯಿಂದ ಕೆಲಸ ಮಾಡುವಂತಹ ಕೆಲಸಗಾರರನು ತೆಗೆದುಕೊಳ್ಳುತ್ತಾರಾ ಅಥವಾ ಇದೆ ರೀತಿ ಮುಂದುವರೆಸತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ,