ಪೆಟ್ರೋಲ್ ಬೆಲೆ ಖಂಡಿಸಿ ಘಟಪ್ರಭಾದಲ್ಲಿ ಕಾಂಗ್ರೇಸ್ಸಿನಿಂದ ಪ್ರತಿಬಟನೆ,
ಘಟಪ್ರಭಾ : ಇವತ್ತು ಗೋಕಾಕ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆ ಮಾಡುತ್ತಿರುವುದನ್ನು ನಾಟ್ ಔಟ್ ಹಂಡ್ರೆಡ್ ಆಗಿರುವುದನ್ನು ಖಂಡಿಸಿ ಘಟಪ್ರಭಾ ಪೆಟ್ರೋಲ್ ಪಂಪ್ ಎದುರು ಪ್ರತಿಭಟನೆ ಮಾಡಲಾಯಿತು ಪೆಟ್ರೋಲ್ ಪಂಪ್ ಎದುರು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನರೇಂದ್ರ ಮೋದಿ ವೇಷದಾರಿಯಿಂದ ಪೆಟ್ರೋಲ್ ಹಾಕಿಸಿಕೊಂಡರು ನಂತರ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಡಿಸೇಲ್ ಪೆಟ್ರೋಲ್ ಬೆಲೆ ಎರಿಕೆ ಅಗತ್ಯ ವಸ್ತುಗಳ ಬೆಲೆ ಎರಿಕೆಯಾಗಿದ್ದರಿಂದ ಕೊರೋನಾ ನಿರ್ವಹಣೆಯಲ್ಲಿ ವಿಫಲಾಗಿದ್ದಕ್ಕೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸನ್ಮಾನ ಮಾಡಿ ವಿಶ್ವ ಗುರು ಪ್ರಶಸ್ತಿ ನೀಡಿದಂತೆ ವ್ಯಂಗ್ಯ ವಾಡಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪ್ರಕಾಶ ಡಾಂಗೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರೆಹಮಾನ್ ಮೊಕಾಶಿ ಕಾಂಗ್ರೆಸ್ ಮುಖಂಡರಾದ ಮಾರುತಿ ವಿಜಯನಗರ ಪುಟ್ಟು ಖಾನಾಪುರ ರಾಮಪ್ಪ ದೇಮಣ್ಣವರ್ ರವೀಂದ್ರ ನಾವಿ ಅರ್ಜುನ್ ಗಂಡವಗೋಳ ಪ್ರವೀಣ್ ತುಕಾನಟ್ಟಿ ನಿತಿನ್ ಮುದ್ನಾಳ ರಾಜು ದೊಡ್ಮನಿ ಮೀರಾ ಬಳಗಾರ ಇನಾಯತ್ ಬಾಳೆಕುಂದ್ರಿ ಸುನಿಲ್ ಗುಡ್ಡ ಕಾಯಿ ಮುನ್ನಾ ಪಾಶ್ಚಾಪುರೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Fast9 Latest Kannada News