ಖಾಸಗಿ ಸಂಸ್ಥೆಯ ಶಿಕ್ಷಕರಿಗೆ ಕಿಟ್ ವಿತರಿಸಿ ಮಾನವಿಯತೆ ಮೆರೆದ ಆಡಳಿತ ಮಂಡಳಿ,
ಕೊಣ್ಣೂರ : ಕೊರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲಾ ಅದು ಯಾರನ್ನು ಕೂಡ ಬಿಟ್ಟಿಲ್ಲಾ ಅದರಂತೆ ಕೊರೊನಾ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕಿಯನ್ನು ಇವತ್ತು ನರೆಗಾ ಕೂಲಿ ಮಾಡುವಂತಹ ಪರಿಸ್ಥಿತಿಗೆ ತಂದೊದಗಿದೆ,
ಇತ್ತ ಖಾಸಗಿ ಶಾಲೆಗೆ ಮಕ್ಕಳ ವಿದ್ಯಾಬ್ಯಾಸದ ಪ್ರವೇಶ ಶುಲ್ಕ ಬರಿಸಲು ಪಾಲಕರ ಹತ್ತಿರ ಹಣ ಇಲ್ಲದೆ ಹಿಂದೇಟು ಹಾಕುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಶ್ರೀ ಆಚಾರ್ಯ ಶಾಂತಿಸಾಗರ ತಪೋವನ ಶಿಕ್ಷಣ ಸಂಸ್ಥೆಯ ಆಡಳಿತಮಂಡಳಿಯವರು ತಮ್ಮ ಸಂಸ್ಥೆಯಲ್ಲಿ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಮತ್ತು ಆಯಾಗಳಿಗೆ ದಿನಶಿ ಕಿಟ್ ನೀಡಿ ಮಾನವಿಯತೆ ಮೆರೆದಿದ್ದಾರೆ.
ತಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮಗೆ ದಿನಸಿ ಕಿಟ್‌ಗಳನ್ನು ನಿಡಿರುವ ಆಡಳಿತ ಮಂಡಳಿಯ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಸ್ಥಳಿಯ ಶಿಕ್ಷಣ ಪ್ರೇಮಿಗಳಾದ ಮಹಾವೀರ ಬುಜಬಲಿ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷರಾದ ಜಿನ್ನಪ್ಪಾ ಚೌಗಲಾ, ಕಾರ್ಯದರ್ಶಿ ಸತ್ತೆಪ್ಪ ಹಣಮಂತ ,ಹೋಳಿ, ಉಪಾದಕ್ಷಕರಾದ ಮಹಾವೀರ ಬೂದಿಗೊಪ್ಪ,ಸದಸ್ಯರಾದ ಸಿದ್ದಪ್ಪಾ ಬೊರಗಲ್ಲಿ. ಎ,ಬಿ,ಹೋಳಿ,ಶಿಕ್ಷಕಿಯರಾದ ಸುದಾ ಪೂಜೇರಿ,ಗೀತಾ ಹಲಗಿ,ಆರತಿ ಐಹೋಳೆ,ಸವಿತಾ ಪೂಜೇರಿ,ಶೋಭಾ ಗುಡದವರ,ಭಾರತಿ ಸಂಗೋಳ್ಳಿ
ಸೇರಿದಂತೆ ಇತರರು ಇದ್ದರು.