Breaking News

ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ

Spread the love

ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ.

ಘಟಪ್ರಭಾ : ಕೆನಾಲ್ ದಲ್ಲಿ ಬಟ್ಟೆ ತೊಳೆಯಲು ಹೊದ ಮಹಿಳೆ ನೀರು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಘಟಪ್ರಭಾ ಪಟ್ಟಣದ ಹೊರ ವಲಯದ ಕೆನಾಲ್ ದಲ್ಲಿ ನಡೆದಿದೆ.
ನೀರು ಪಾಲಾದ ದುರ್ದೈವಿ ಮಹಿಳೆಯನ್ನು ಹಬೀಬಾ ಇಮ್ತಿಯಾಜ್ ಮೋಮಿನ (28) ಎಂದು ಗುರುತಿಸಲಾಗಿದೆ.
ಘಟನೆ : ಮಂಗಳವಾರ ಬೆಳಗ್ಗೆ ಗಂಡ-ಹೆಂಡತಿ ಬಟ್ಟೆ ತೊಳೆಯಲು ಪಟ್ಟಣದ ಹೊರ ವಲಯದ ಕೆನಾಲ್ ಗೆ ಹೋಗಿದ್ದಾರೆ. ಆ ಸಮಯದಲ್ಲಿ ಬಟ್ಟೆ ತೊಳೆಯುತ್ತಿರುವಾಗ ಮಹಿಳೆಯ ಕೈಯಿಂದ ಬಕೇಟ್ ಜಾರಿ ಹೋಗಿದೆ, ಅದನ್ನು ಹಿಡಿಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಮಹಿಳೆ ಕೆನಾಲ್ ದಲ್ಲಿ ಬಿದ್ದಿದ್ದಾಳೆ. ಮಹಿಳೆ ಬೀಳುವುದನ್ನು ನೋಡಿದ ಆಕೆಯ ಗಂಡ ತಕ್ಷಣ ಆತಳನ್ನು ಹಿಡಿಯಲು ಹೋಗಿದ್ದಾನೆ. ಆದರೆ ಸೀರಿನ ಸೆಳೆತ ಜೋರಾಗಿರುವುದರಿಂದ ಏನೂ ಪ್ರಯೋಜನವಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಈ ವೇಳೆ ಅವನು ಆಕೆಯನ್ನು ಹಿಡಿಯಲು ಹೋದಾಗ ನೀರಿನ ರಭಸಕ್ಕೆ ಹರಿದು ಮುಂದೆ ಹೋಗಿದ್ದಾಳೆ. ಅವನು ಕೂಡ ನೀರಿನಲ್ಲಿ ಹರಿದು ಹೋಗುತ್ತಿದ್ದನೆಂದು, ಆದರೆ ಅದೃಷ್ಟವಶಾತ್ ಅದೇ ವೇಳೆಗೆ ವಾಕಿಂಗ್ ಬಂದ ವ್ಯಕ್ತಿ ಆತನನ್ನು ಕಾಪಾಡಿದ್ದಾನೆ ಎನ್ನಲಾಗುತ್ತಿದೆ.
ವಿಷಯ ತಿಳಿದ ಕೂಡಲೇ ಘಟಪ್ರಭಾ ಪೊಲೀಸರು ಸ್ಥಳಕ್ಕಾಗಮಿಸಿದ್ದರಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿಯವರ ಸಹಾಯದಿಂದ ಘಟನಾ ಸ್ಥಳದಿಂದ ಸುಮಾರು 500ಮೀ ದೂರದಲ್ಲಿ ಮಹಿಳೆಯ ಶವವನ್ನು ಹುಡುಕಿ ತೆಗೆದಿದ್ದಾರೆ.
ಕಾರ್ಯಾಚರಣೆ ವೇಳೆ ಮಹಿಳಾ ಪಿಎಸ್ಐ ಎಂ.ಸಿ.ಹಿರೇಮಠ, ಕೆ.ಆರ್.ಬಬಲೇಶ್ವರ,ಎಸ್. ಎನ್. ಪತ್ತಾರ, ಹನಮಂತ ಮಲ್ಲಾಡದವರ, ವಿಠ್ಠಲ ಕೋಳಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದರು.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *