ಸಂಚಾರಿ ನಿಯಮ ಪಾಲಿಸಲು ಟ್ರ್ಯಾಕ್ಟರ ಚಾಲಕರಿಗೆ ಪ್ರೊಬೆಶನರಿ ಡಿ,ಎಸ್,ಪಿ, ಡಿ,ಎಚ್,ಮುಲ್ಲಾ ಸೂಚನೆ
ಕಬ್ಬು ಕಟಾವು ಮಾಡುವ ಋತು ಪ್ರಾರಂಬವಾಗಿದ್ದರಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವಾಗ ರಸ್ತೆ ಮೇಲೆ ಸಂಚರಿಸುವವರಿಗೆ ಮತ್ತು ಇನ್ನೂಳಿದ ವಾಹನ ಚಾಲಕರಿಗೆ
ರಾತ್ರಿಯಲ್ಲಿ ಕಬ್ಬಿನ ಟ್ರ್ಯಾಕ್ಟರ ಟ್ರೈಲರ್ ಕಾಣದೆ ಎಷ್ಟೋ ಅಪಘಾತಗಳು ಸಂಭವಿಸಿವೆ,
ಅದಕ್ಕಾಗಿ ಗೋಕಾಕ ವಲಯದ ಪ್ರೋಬೆಶನರಿ ಡಿ,ಎಸ್,ಪಿ,ಡಿ,ಎಚ್,ಮುಲ್ಲಾ ಇವರ ನೇತೃತ್ವದಲ್ಲಿ ಗ್ರಾಮೀಣ ಪೋಲಿಸ ಠಾಣೆಯ ಪೋಲಿಸ ತಂಡದ ಜೊತೆಯಲ್ಲಿ ಕೊಳವಿ ಸಕ್ಕರೆ ಕಾರ್ಖಾನೆಗೆ ತೆರಳಿ ಅಲ್ಲಿನ ಟ್ರ್ಯಾಕ್ಟರ ಚಾಲಕರಿಗೆ
ಟ್ರ್ಯಾಕ್ಟರಗಳಿಗೆ ರೇಡಿಯಂ ರೆಫ್ಲೆಕ್ಟರ್ ಅಳವಡಿಸುವ ಕಾರ್ಯಕ್ಕೆ ಪೊಲೀಸರು ಮುಂದಾದರು. ಲೌಡ್ ಸ್ಪೀಕರ್ ಹಚ್ಚಿ ಕೊಂಡು ಹೋಗುವ ಕಬ್ಬಿನ ಟ್ರ್ಯಾಕ್ಟರ್ ಮಾಲಕರಿಗೆ ಡಿ,ಎಸ್,ಪಿ,ಡಿ,ಎಚ್,ಮುಲ್ಲಾ ತಿಳಿಸಿದರು.
ಅದಲ್ಲದೆ ರಸ್ತೆ ಮೇಲೆ ಸಂಚರಿಸುವ ಟ್ರ್ಯಾಕ್ಟರ ನಿಲ್ಲಿಸಿ ಸ್ವತಃ ತಾವೆ ರಿಪ್ಲೆಕ್ಟರ್ ಅಲಕವಡಿಸಿ ಚಾಲಕರಿಗೆ ಸಂಚಾರಿ ನಿಯಮಗಳನ್ನು ಪಾಲಿಸಲು ತಿಳಿಸಿ ಎಲ್ಲ ದಾಖಲೆಗಳನ್ನು ತಮ್ಮ ಹತ್ತಿರ ಇಟ್ಟುಕೊಳ್ಳಲು ಸೂಚಿಸಿದರು.ಈ ಸಂದರ್ಭದಲ್ಲಿ ಎ,ಎಸ್,ಐ,ಟಿ,ಎಸ್,ದಳವಾಯಿ,ಪೋಲಿಸ್ ಸಿಬ್ಬಂದಿಗಳಾದ ಡಿ,ಬಿ,ಅಂತರಗಟ್ಟಿ,ಶಂಕರ ಜಂಬಗಿ,ಸಂಜು ಹಡಗಿನಾಳ,ವೆಂಕಪ್ಪಾ ಪೂಜೇರಿ ಉಪಸ್ಥಿತರಿದ್ದರು.