ಕಿಡಿಗೇಡಿಗಳಿಂದ ನಾಶವಾಗುತ್ತಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆ
ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆಯನ್ನೆ ಟಾರ್ಗೆಟ್ ಮಾಡಿ ದಿನಾಲು ಒಂದಲ್ಲ ಒಂದು ಶಾಲೆಯಲ್ಲಿನ ವಸ್ತುಗಳನ್ನು ಹಾಳುಮಾಡುತ್ತಿದ್ದ ಕೀಡಿಗೇಡಿಗಳು ಇವತ್ತು ಶಾಲೆಗೆ ದೇಣಿಗೆ ರೂಪದಲ್ಲಿ ಶಾಲೆಯಲ್ಲಿನ ಹೆಣ್ಣುಮಕ್ಕಳಿಗೆ ಕಟ್ಟಿಸಿದ ಶೌಚಾಲಯಗಳ ಬಾಗಿಲು ಮತ್ತು ಕಬಾರ್ಡಗಳನ್ನು ಒಡೆದು ನಾಶ ಮಾಡಿದ್ದಾರೆ.
ಊರಿನ ಮದ್ಯದಲ್ಲಿರುವ ಸರಕಾರಿ ಶಾಲೆಗೆ ಈ ಪರಿಸ್ಥಿತಿ ಬಂದಿದೆ ಇಲ್ಲಿನ ಶಾಲೆ ಅಬಿವೃದ್ದಿ ಮಾಡಲಿಕ್ಕಾಗಿಯೆ ಎಸ್,ಡಿ,ಎಮ್,ಸಿ, ಅದ್ಯಕ್ಚರು, ಸದಸ್ಯರುಗಳ ಕಮಿಟಿಯನ್ನು ರಚಿಸಿದ್ದಾರೆ, ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೂ ಇವರಿಗೆ ಈ ಸರಕಾರಿ ಶಾಲೆಯ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ ಎಂಬುದು ತಿಳಿಯುತ್ತದೆ, ಅಷ್ಟೇ ಅಲ್ಲದೆ ಕೆಲವು ದಿನಗಳ ಹಿಂದೆಯೆ ಇಲ್ಲಿನ ಶಿಕ್ಷಕರು ಕಿಡಿಗೇಡಿಗಳ ಕೈಯಲ್ಲಿ ಸಿಕ್ಕಿ ಹಾಳಗಿದ್ದ ಕುಡಿಯುವ ನೀರಿನ ನಳಗಳಿಗೆ ದೇಣಿಗೆ ಎತ್ತಿ ಕಬ್ಬಿನದ ಜಾಳಿಗೆಯಿಂದ ಬದ್ರ ಮಾಡಿದರು ಸಹ ಅದನ್ನು ಬಿಡದೆ ಅದನ್ನು ನಾಶ ಮಾಡಿ ಅಲ್ಲಿಯೆ ಶೌಚ ಮಾಡಿ ಕುಡಿದು ಬಾಟಲುಗಳನ್ನು ಒಡೆದುಹೊಗಿದ್ದಾರೆ,
ಇದರಿಂದ ಇಲ್ಲಿನ ವಿದ್ಯೆಕಲಿಯುವ ಮಕ್ಕಳು ಇದರಿಂದ ಬೇಸತ್ತಿದ್ದಾರೆ.ಅಷ್ಟೆ ಅಲ್ಲದೆ ಇಲ್ಲಿನ ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸಬೇಕಾ ಅಥವಾ ಕೀಡಿಗೇಡಿಗಳು ಮಾಡಿದನ್ನ ಸ್ವಚ್ಚ ಮಾಡಬೇಕಾ ಅನ್ನುವ ಗೊಂದಲದಲ್ಲಿದ್ದಾರೆ, ಇಷ್ಟಾದರೂ ಸಹ ಒಂದು ಬಾರಿಯೂ ಎಸ್,ಡಿ,ಎಮ್,ಸಿ ಸದಸ್ಯರುಗಳು ಇಲ್ಲಿನ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಯಾರು ಕೂಡ ವಿಚಾರಿಸಿಲ್ಲ,ಹಾಗಾದರೆ ಇವರು ಹೆಸರಿಗಷ್ಟೆನಾ ಎಂಬುದು ಸಂಶಯವ್ಯಕ್ತವಾಗಿದೆ, ಇನ್ನದಾರೂ ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕೀಡಿಗೇಡಿಗಳಿಂದ ಮುಕ್ತಿ ಕೊಡಿಸುತ್ತಾರಾ ಅನ್ನೊದನ್ನ ಕಾದು ನೋಡಬೇಕಾಗಿದೆ.