ದುಡಿಯುವ ಕಾರ್ಮಿಕರೆಲ್ಲರೂ ಕಾಯಕ ಯೋಗಿಗಳು : ವೆಂಕಟೇಶ ಶಿಂಧಿಹಟ್ಟಿ
ದೇಶದ ಇವತ್ತು ಸಂದರಕಾಣಲಿಕ್ಕೆ ಹಗಲಿರುಳು ದುಡಿಯುವ ಕಾರ್ಮಿಕರೆ ಕಾರಣ,ಅವರಿಂದಲೆ ಇವತ್ತು ಜಗತ್ತು ಸುಂದರವಾಗಿದೆ,ದುಡಿಯುವ ಕಾರ್ಮಿಕರೆಲ್ಲರೂ ಕಾಯಕ ಯೋಗಿಗಳು ಎಂದು ಕಾರ್ಮಿಕ ಇಲಾಖೆ ಪ್ರಾದೇಶಿಕ ಉಪಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಯವರು ಹೇಳಿದರು.
ಗೋಕಾಕ ಶಾಸಕರ ಗೃಹ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ಗೋಕಾಕ, ಕರ್ನಾಟಕ ರಾಜ್ಯ ನೌಕರರ ಸಂಘ ಗೋಕಾಕ ಶಾಖೆ ಮತ್ತು ಗೋಕಾಕ ತಾಲೂಕು ಪತ್ರಕರ್ತ ಸಂಘ (ರಿ) ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಆಚರಿಸಿದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕರಾದ ರಮೇಶ ಜಾರಕಿಹೋಳಿಯವರ ಸಹಕಾರ ಮತ್ತು ಮುತುವರ್ಜಿಯಿಂದ ಗೋಕಾಕ ಕ್ಷೇತ್ರದಲ್ಲಿರುವ ಕಾರ್ಮಿಕರಿಗೆ ಹಲವಾರು ಸೌಲಬ್ಯಗಳು ದೊರೆತಿವೆ, ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಕೊರೊನಾ ಸಮಯದಲ್ಲಿ ಆಹಾರ ಕಿಟಗಳನ್ನು ನೀಡಿ ಕಾರ್ಮಿಕರಿಗೆ ಆರೋಗ್ಯ,ವಸತಿ, ವೇತನ , ವಿಮೆ, ಮಕ್ಕಳ ಶಿಕ್ಷಣ ಸೇರಿದಂತೆ ಹಾಗೂ ಮದುವೆ ಮುಂತಾದ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ ಇವುಗಳ ಸದುಪಯೋಗ ಪಡೆದುಕೊಂಡು ಕಾರ್ಮಿಕರು ನೆಮ್ಮದಿಯ ಜೀವನ ನಡೆಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನಗರವನ್ನು ಸೌಂದರ್ಯವಾಗಿಡಲು ಶ್ರಮಿಸುತ್ತಿರುವ ನಗರಸಭೆಯ ಪೌರಕಾರ್ಮಿಕರನ್ನು, ವಿವಿಧ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಹಾಗೂ ಪತ್ರಕರ್ತರನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ನಗರಸಭೆ ಅದಕ್ಷ ಜಯಾನಂದ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕರ ಸಹಾಯಕರಾದ ಕಾಂತು ಎತ್ತಿನಮನಿ, ಸುರೇಶ ಸನದಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ, ಟಿಎಚ್‍ಓ ಮುತ್ತಣ್ಣ ಕೊಪ್ಪದ, ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ, ತಾಲೂಕಾಧಿಕಾರಿಗಳಾದ ಡಾ. ಮೋಹನ ಕಮತ, ಎಮ್ ಎಮ್ ನದಾಫ್, ಜಯಶ್ರೀ ಶಿಲವಂತ, ನೌಕರರ ಸಂಘದ ಅಧ್ಯಕ್ಷ ಬಸವರಾಜ ಮುರಘೋಡ, ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮೇಗೇರಿ, ಗೌರವಾಧ್ಯಕ್ಷ ಭೀಮಶಿ ಭರಮನ್ನವರ, ಕರವೇ ಗಜಸೇನೆ ಅಧ್ಯಕ್ಷ ಪವನ ಮಹಾಲಿಂಗಪೂರ ಸೇರಿದಂತೆ ಅನೇಕರು ಇದ್ದರು.