ಜೈಂಟ್ಸ ಗ್ರುಪ್ ಆಫ್ ಘಟಪ್ರಭಾ ವತಿಯಿಂದ ಗುರು ಸ್ಮರಣೆ ಹಾಗೂ ಶಿಕ್ಷಕರ ದಿನಾಚರಣೆ
ಘಟಪ್ರಭಾ: ಸ್ಥಳೀಯ ದಾನಮ್ಮ ದೇವಸ್ಥಾನದಲ್ಲಿ ಸೋಮವಾರದಂದು ಸಂಜೆ ಜೈಂಟ್ಸ ಗ್ರುಪ್ ಆಫ್ ಘಟಪ್ರಭಾದವರು ಗುರು ಸ್ಮರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದರು,ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಉದ್ಘಾಟಿಸಿ ಮಾತನಾಡಿದ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ನೈತಿಕ ಸಾಮಾಜಿಕ ಸ್ಪರ್ಧಾತ್ಮಕ ಶಿಕ್ಷಣದ ಅವಶ್ಯಕತೆ ಬೇಕಾಗಿದೆ ಶಿಕ್ಷಕರು ಅದನ್ನು ಪೂರೈಸಲು ಮುಂದಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಘಟಪ್ರಭಾದ ಎಸ್ ಡಿ ಟಿ ಯ ಪ್ರೊ ವಿ ಕೆ ನಾಯಿಕ, ಸರಸ್ವತಿ ಶಿಕ್ಷಣ ಸಂಸ್ಥೆಯ ಬಾಳೇಶ ದೊಡಮನಿ, ಕೆ ಆರ್ ಎಚ್ ದ ಅಶ್ಪಾಕ ಶಾಪೂರ, ಸರಕಾರಿ ಶಾಲೆಗಳ ಶಾಲೆಗಳ ಶ್ರೀಮತಿ ದಾದಾಗೋಳ ,ಶ್ರೀ ಹೊನಕುಪ್ಪಿ ಅವರನ್ನು ಸನ್ಮಾನ ಮಾಡಲಾಯಿತು ಸರಕಾರದಿಂದ ಪ್ರಶಸ್ತಿ ಪಡೆದ ಹೊನವಾಡ ಗುರುಗಳು ಮತ್ತು ಯಾದವಾಡ ಗುರುಗಳಿಗೆ ಸತ್ಕರಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರನ್ನು ಸಹ ಗ್ರುಪ್ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಸ್ ಎಚ್ ಗಿರಡ್ಡಿ, ಗುರುಗಳು ಉಪಾಧ್ಯಕ್ಷರಾದ ಸುಭಾಸ ದಡ್ಡೀಕರ, ಆನಂದ ದೇಶಪಾಂಡೆ, ಕಾರ್ಯದರ್ಶಿ ಶ್ರೀಕಾಂತ ಕುಲಕರ್ಣಿ, ಹಣಕಾಸು ನಿರ್ದೇಶಕರಾದ ಕೆ ಪಿ ಕಳ್ಳೀಮಠ, ಮಾಜಿ ಅಧ್ಯಕ್ಷರಾದ ಕುರಣಗಿ, ಮಹಾಜನ, ಡಾ ನಾಯಿಕವಾಡಿ ಕರ್ಪೂರಮಠ, ಡಾ ಪತ್ತಾರ, ಜೈಂಟ್ಸ ಗ್ರುಪ್ ಆಫ್ ಘಟಪ್ರಭಾ ಸರ್ವ ಸದಸ್ಯರು ಹಾಗೂ ಗಣ್ಯಮಾನ್ಯರು ಉಪಸ್ಥಿತರಿದ್ದರು.