ಸುಳ್ಳು ವದಂತಿಗಳನ್ನು ನಂಬಬೇಡಿ :PSI ಕಿರಣ ಮೋಹಿತೆ
ಗೋಕಾಕ : ಇತ್ತೀಚಿನ ದಿನಗಳಲ್ಲಿ ಯುವಜನತೆ
ವಾಹನಗಳನ್ನು ಚಲಾಯಿಸುವಾಗ ಜಾಗರೂಕತೆಯಿಂದ
ಕಾರ್ಯ ನಿರ್ವಹಿಸಿದರೆ ರಸ್ತೆ ಮೇಲೆ ಆಗುವ
ಅನಾಹುತಗಳನ್ನು ತಡೆಗಟ್ಟಬಗಹುದೆಂದು ಗೋಕಾಕ ಗ್ರಾಮೀಣ ಠಾಣೆಯ ಪಿ.ಎಸ್.ಐ ಕಿರಣ ಮೊಹಿತೆ, ಹೇಳಿದರು.ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ರೇಲ್ವೆ ಸ್ಟೇಷನದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ಸಂಯೋಗದಲ್ಲಿ ಹಮ್ಮಿಕೊಂಡಂತಹ ಶಾಂತಿ ಸಭೆಯಲ್ಲಿ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ದುಶ್ಚಟಗಳಿಗೆ
ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಂಡು,
ಕುಟುಂಬಸ್ಥರಿಗೆ ಕಷ್ಟ ಭಾರವಾಗುತ್ತಿದ್ದಾರೆ. ಜೊತೆಗೆ ಮದ್ಯಪಾನ ಸೇವಿಸಿ ಹಾಗೂ ವಾಹನ ಕಂಟ್ರೋಲ್ ಆಗದ ರೀತಿ ವಾಹನ ಚಲಾವಣೆ ಮಾಡುವುದರಿಂದ ಹೆಚ್ಚಿನ ರಸ್ತೆ ಅಪಘಾತಗಳು ಆಗುತ್ತಿವೆ. ಅದರ ಜೊತೆಯಲ್ಲಿ ಈಗಿನವರು ಸುಳ್ಳು ವದಂತಿಗಳನ್ನು ನಂಬಿ ಮೊಸ ಹೋಗುತಿದ್ದಾರೆ,ಅನ್ಯ ಕರೆಗಳನ್ನು ನಂಬಿ ಮೊಸಹೊಗಬಾರದು,ಆದಷ್ಟೂ ಇಂತಹ ಚಟುವಟಿಕೆಗಳಿಂದ ದೂರವಿರಬೇಕೆಂದು,ತಮಗೆನಾದರೂ ಸಂಶಯಾಸ್ಪದವಾಗಿ ಯಾರಾದರೂ ಕಂಡು ಬಂದಲ್ಲಿ 112 ಗೆ ಕರೆ ಮಾಡಲು ತಿಳಿಸಿದರು.ಅದಲ್ಲದೆ ಈ ಸಂಧರ್ಭದಲ್ಲಿ ಮುಖಂಡ ದನ್ಯಕುಮಾರ ಮೇಗೇರಿ,ಕೊಣ್ಣೂರ ಗ್ರಾಮದ ಮಹಾಂತೇಶ ಈರನಟ್ಟಿ, ಝಾಹೀರ ಮುಲ್ಲಾ, ಪೋಲಿಸ್ ಸಿಬ್ಬಂದಿಯಾದ ನಾಗರಾಜ ದುರದುಂಡಿ ಹಾಗೂ ಹಲವಾರು ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.