ಆನಂದ ಮಾಮನಿ ಅವರಿಗೆ ಶ್ರದ್ಧಾಂಜಲಿ
ಗೋಕಾಕ್- ಶನಿವಾರ ತಡರಾತ್ರಿ ಅಗಲಿದ ವಿಧಾನ ಸಭೆ ಉಪ ಸಭಾಪತಿ ಹಾಗೂ ಸವದತ್ತಿ ಶಾಸಕ ಆನಂದ ಮಾಮನಿ ಅವರಿಗೆ ಅರಭಾವಿ ಬಿಜೆಪಿ ಮಂಡಲದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ದಿ. ಆನಂದ ಮಾಮನಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಅರಭಾವಿ ಬಿಜೆಪಿ ಮಂಡಳ ಅಧ್ಯಕ್ಷ ಮಹಾದೇವ ಶೆಕ್ಕಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿಪಿ ಯಕ್ಸಂಬಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಎಸ್ಟಿ ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಎಸ್ಸಿ ಮೋರ್ಚಾ ಅಧ್ಯಕ್ಷ ನಾಗಪ್ಪ ಕುದರಿ, ಅಡಿವೆಪ್ಪ ಕಂಕಾಳಿ, 
ಅಲೆಮಾರಿ ಜನಾಂಗದ ಜಿಲ್ಲಾ ಅಧ್ಯಕ್ಷ ಅಮೃತ ದಪ್ಪಿನವರ, ಭೀಮಶಿ ಪಾತ್ರೂಟ, ಸಿದ್ದು ದುರದುಂಡಿ,ಕುಮಾರ ಪೂಜೇರಿ, ಅಡಿವೆಪ್ಪ ಭಂಗಿ, ಭರಮಪ್ಪ ಪಾಶ್ಚಾಪೂರ, ಶ್ರೀಶೈಲ ಗಡಾದ,ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಿ.ಮಾಮನಿ ಅವರ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಲಾಯಿತು.
 Fast9 Latest Kannada News
Fast9 Latest Kannada News
				 
			 
			 
			 
		 
						
					 
						
					 
						
					 
					
				