- ಮದುವೆ ದಿನಾಂಕ ನಿಶ್ಚಯ ಮಾಡಲು ಬರುವಾಗ ಹೃದಯಾಘಾತದಿಂದ ಕನಸಗೇರಿ ಯೋಧ ಸಾವು

ಇನ್ನೆನು ಎಂಟು ದಿನಗಳಾದ ಮೇಲೆ ನೂರಾರು ಜನರ ಮದ್ಯೆ ಮದುವೆ ಮಾಡಿಕೊಳ್ಳಲು ಸ್ವಗ್ರಾಮಕ್ಕೆ ರೈಲಿನಲ್ಲಿ ಆಗಮಿಸುತ್ತಿರುವಾಗ ಸಾವಿಗೀಡಾದ ಘಟನೆ ಪಂಜಾಬಿನ ಲೂದಿಯಾನದಲ್ಲಿ ಹೃದಯಾಘಾತದಿಂದ ಯೋಧನೊರ್ವ ಸಾವಿಗಿಡಾದ ಘಟನೆ ನಡೆದಿದೆ
8 ವರ್ಷಗಳ ಹಿಂದೆ ಭಾರತಾಂಬೆಯ ಸೇವೆ ಮಾಡಲು ಸೈನ್ಯಕ್ಕೆ ಸೇರಿದ್ದ ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಕಾಶಿನಾಥ ಕೃ,ಶಿಂದಿಗಾರ 28ವರ್ಷ, ಎಂಟು ದಿನಗಳ ನಂತರ ಸ್ವಗ್ರಾಮದಲ್ಲಿ ನಡೆಯುವ ತನ್ನ ಮದುವೆಯ ದಿನಾಂಕ ನಿಶ್ಚಯ ಮಾಡಲು ಪಂಜಾಬನಿಂದ ದಿನಾಂಕ 8 ರಂದು ರೈಲಿನಲ್ಲಿ ಬರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದು
ಸುದ್ದಿ ತಿಳಿದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತು, ಇವತ್ತು ಸ್ವಗ್ರಾಮ ಕನಸಗೇರಿಗೆ ಮೃತ ಯೋದ ಕಾಶಿನಾಥ ಕೃ, ಶಿಂದಿಗಾರ ದೇಹ ತಲುಪಿದ್ದು ಗ್ರಾಮದ ತುಂಬೆಲ್ಲಾ ಮೌನ ನಿರಸವಾಗಿದೆ, ಮೃತ ಯೋಧ ಕಾಶಿನಾಥ ಶಿಂದಿಗಾರ ಅಪಾರ ಬಂಧುಗಳನ್ನು ಹೊಂದಿದ್ದೆನ್ನಲಾಗಿದೆ,
Fast9 Latest Kannada News