Breaking News

ರಾಯಣ್ಣನನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡದೆ ಎಲ್ಲ ಜನಾಂಗಗಳು  ಸ್ಮರಿಸುವಂತಾಗಬೇಕು: ಸರ್ವೊತ್ತಮ ಜಾರಕಿಹೋಳಿ.

Spread the love

ರಾಯಣ್ಣನನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡದೆ ಎಲ್ಲ ಜನಾಂಗಗಳು  ಸ್ಮರಿಸುವಂತಾಗಬೇಕು: ಸರ್ವೊತ್ತಮ ಜಾರಕಿಹೋಳಿ.

ಗೋಕಾಕ್- ದೇಶಪ್ರೇಮಿ ಶೂರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ಅಧಿಕ ಮಾಸದಲ್ಲಿ ಕಪರಟ್ಟಿಯ ಬಸವರಾಜ ಹಿರೇಮಠ ಅವರು ಜನ ಜಾಗೃತಿ ಮೂಡಿಸಲು ಹಳ್ಳಿ- ಹಳ್ಳಿಗೂ ಕನಕದಾಸರ ಮಹಾಪೂಜೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಯುವ ಧುರೀಣ ಸರ್ವೊತ್ತಮ ಜಾರಕಿಹೊಳಿ ಪ್ರಶಂಶಿಸಿದರು.
ಶನಿವಾರ ನಗರದ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರತಿ ಹಳ್ಳಿ- ಹಳ್ಳಿಗಳಲ್ಲಿಯೂ ನಡೆಯಬೇಕು. ಇದರಿಂದ ಇಂದಿನ ಯುವ ಜನಾಂಗಕ್ಕೆ ಮಹಾನ್ ಪುರುಷರ ತತ್ವಗಳನ್ನು ಪ್ರಚುರಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಯಣ್ಣನನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡಬೇಡಿ. ಎಲ್ಲ ಜನಾಂಗಗಳು ಇಂತಹ ಮಹನೀಯರನ್ನು ಸ್ಮರಿಸುವ ಕೆಲಸ ಮಾಡಬೇಕು. ಸ್ವಾತಂತ್ರ್ಯ ಹೋರಾಟಗಾರರು, ದೇಶ ಪ್ರೇಮಿಗಳನ್ನು ನಿತ್ಯ ನೆನಪಿಸುವ ಕೆಲಸವನ್ನು ಮಾಡಬೇಕಿದೆ. ಬಸವರಾಜ ಸ್ವಾಮಿಗಳು ಈ ದಿಸೆಯಲ್ಲಿ ಉತ್ತಮವಾದ ಹೆಜ್ಜೆಯನ್ನಿಟ್ಟು ಶೂರ ಸಂಗೊಳ್ಳಿ ರಾಯಣ್ಣನನ್ನು ಸ್ಮರಿಸಲು ಜು. ೧೮ ರಿಂದ ಅ. ೧೫ ರ ಅಧಿಕ ಮಾಸದ ಅವಧಿಯಲ್ಲಿ ಮಹಾಪೂಜೆಯಂತಹ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಸ್ವಾಮಿಗಳ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಸವರಾಜ ಸ್ವಾಮಿಗಳು ಮಾತನಾಡಿ, ಇದೇ ದಿ. ೧೮ ರಿಂದ ಮುಂದಿನ ಅಗಸ್ಟ್ ತಿಂಗಳ ೧೫ ರ ತನಕ ಗೋಕಾಕ್ ಮತ್ತು ಮೂಡಲಗಿ ತಾಲೂಕಿನ ೩೦ ಗ್ರಾಮಗಳಲ್ಲಿ ಕನಕದಾಸರ ಮಹಾಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಾರಕಿಹೊಳಿ ಸಹೋದರರು ತನು, ಮನ, ಧನದಿಂದ ನಮಗೆ ಎಲ್ಲ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.
ಅರಭಾವಿ ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಲಕ್ಕಪ್ಪ ಲೋಕೂರಿ, ಮುಖಂಡ ಲಕ್ಷ್ಮಣ ಮಸಗುಪ್ಪಿ, ವಿನಾಯಕ ಕಟ್ಟಿಕಾರ, ಮಾರುತಿ ಮರಡಿ, ಬಸವರಾಜ ಇಟ್ಟಣವರ, ಸಿದ್ದಣ್ಣ ಮರಡಿ, ಪಾಂಡುರಂಗ ದೊಡಮನಿ, ಮಂಜು ಹುಣಶಿಕಟ್ಟಿ, ಶಂಕರ ಕುರಿಬಾಗಿ, ಬಸವರಾಜ ಭೂತಾಳಿ, ಈರಣ್ಣ ಮೋಡಿ, ಹಾಲುಮತ ಸಮಾಜದ ಮುಖಂಡರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Fast9 News

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *