Breaking News

ಗೋಕಾಕ ಪೋಲಿಸರಿಂದ ಅಂತರಾಜ್ಯ ಕಳ್ಳರ ಭಂದನ,ಭಾರಿ ಪ್ರಾಮಾಣದ ಆಭರಣ ವಶ.*

Spread the love

*ಗೋಕಾಕ ಪೋಲಿಸರಿಂದ ಅಂತರಾಜ್ಯ ಕಳ್ಳರ ಭಂದನ,ಭಾರಿ ಪ್ರಾಮಾಣದ ಆಭರಣ ವಶ.*

ಗೋಕಾಕ : ದಿನಾಂಕ: 11-11-2022 ರಂದು ಗೋಕಾಕದ ವಿವೇಕಾನಂದ ನಗರದ ಪ್ರಕಾಶ ಲಕ್ಷಣ ತೋಳಿನವರ ಇವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದು ಅಲ್ಲದೇ ದಿನಾಂಕಃ 23-05-2025 ರಂದು ತವಗದ ಶ್ರೀ ಬೀರಸಿದ್ದೇಶ್ವರ ಗುಡಿಯಲ್ಲಿ ಚಿನ್ನಾಭರಣಗಳನ್ನು ಕನ್ನ ಹಾಕಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಗೋಕಾಕ ಪೋಲಿಸರು ಯಶಸ್ವಿಯಾಗಿದ್ದಾರೆ.

ಕಳ್ಳತನದ ಬಗ್ಗೆ ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು, ಸದರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಎಸ್.ಪಿ.ಯವರು ಪ್ರಕರಣಗಳ ಪತ್ತೆಗಾಗಿ ಸಿ,ಪಿ,ಆಯ್, ಗೋಪಾಲ ರಾಥೋಡ ಗೋಕಾಕ ವೃತ್ತ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಹೆಚ್ಚುವರಿ ಬೆಳಗಾವಿ ಎಸ್,ಪಿ, ಎಂ,ವೇಣುಗೋಪಾಲ್ ಹಾಗೂ ಗೋಕಾಕ ಉಪವಿಭಾಗದ ಡಿ,ಎಸ್,ಪಿ,ದೂದಪೀರ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ರಚಿಸಿದ ತನಿಖಾ ತಂಡವು ಸದರಿ ಪ್ರಕರಣಗಳಲ್ಲಿ ತನಿಖೆ ಕೈಕೊಂಡು 08 ಜನ ಆರೋಪಿತರನ್ನು ಬಂಧಿಸಿ, ಕಳುವಾಗಿದ್ದ 55,60,000 /- ರೂ ಮೌಲ್ಯದ 810 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 8.5 ಕೆ.ಜಿ. ತೂಕದ ಬೆಳ್ಳಿಯ ಆಭರಣಗಳನ್ನು
ವಶಪಡಿಸಿಕೊಂಡಿದ್ದು ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗಳ ಅಪರಾದ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ ವೃತ್ತದ ಸಿ.ಪಿ.ಐ ಗೋಪಾಲ ಆರ್. ರಾಠೋಡ
ಬೆಳಗಾವಿ ಸಿಪಿಆಯ್ ಬಿ.ಆರ್.ಗಡೇಕಾರ.
ಹುಕ್ಕೇರಿ ಪಿ,ಐ,ಆರ್.ಎಮ್ ತಹಶೀಲ್ದಾರ.ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ, ಹಾಗೂ ಗೋಕಾಕ‌ ನಗರ ಪೋಲಿಸ್ ಠಾಣೆಯ ಪಿ,ಎಸ್,ಐ,
ಎಮ್.ಡಿ.ಘೋರಿ ಅಂಕಲಗಿ ಪೋಲಿಸ್ ಠಾಣೆಯ ಪಿ,ಎಸ್,ಐ, ಎಚ್.ಡಿ ಯರಝವಿ
ಮತ್ತು ಸಿಬ್ಬಂದಿಗಳಾದ ಬಿ.ವಿ.ನೇರ್ಲಿ, ವಿ.ಆರ್‌.ನಾಯಕ ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಸ್.ಬಿ.ಮಾನಪ್ಪಗೋಳ, ಎಸ್.ಎಚ್.ಈರಗಾರ, ಎಮ್.ಬಿ.ಗಿಡಗಿ
ಎಮ್.ಎಮ್.ಹಾಲೋಳ್ಳಿ, ಎಸ್.ಎಸ್.ದೇವರ, ಜಿ.ಎಚ್.ಗುಡಿ, ಎಮ್.ಬಿ.ತಳವಾರ, ಎಸ್.ಬಿ.ಪೂಜೇರಿ ಹಾಗೂ ಶ್ರೀಮತಿ ಆರ್.ಎಮ್.ತುಬಾಕಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗ ಸಚಿನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಮಾನ್ಯ ಎಸ್.ಪಿ. ಸಾಹೇಬರು ಮ
ಕಂಠದಿಂದ ಶ್ಲಾಘಿಸಿರುತ್ತಾರೆ.ಮಾನ್ಯ ಬೆಳಗಾವಿ ಎಸ್.ಪಿ.ಯವರು ಬೆಲೆ ಬಾಳುವ ಚಿನ್ನಾಭರಣಗಳನ್ನು ಬ್ಯಾಂಕ ಲಾಕರಗಳಲ್ಲಿ ಇಡುವಂತೆ ಹಾಗೂ ಮನೆಯಿಂದ ಹೊರಗಡೆ ಹೋದಾಗ ಲಾಕಡ ಹೌಸಗಳ ಬಗ್ಗೆ ಸ್ಥಳಿಯ
ಪೊಲೀಸ ಠಾಣೆಗಳಿಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಕೋರಿರುತ್ತಾರೆ.ಇನ್ನು ಇವರ ಕಾರ್ಯದಿಂದ ಗೋಕಾಕ ನಾಗರಿಕರು ಪೊಲಿಸ್ ಇಲಾಖೆಗೆ ಶ್ಲ್ಯಾಘನೀಯ ವ್ಯಕ್ತ ಪಡಿಸಿದ್ದಾರೆ.


Spread the love

About Fast9 News

Check Also

ಕಪರಟ್ಟಿ ಕಳ್ಳಿಗುದ್ದಿ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಶ್ರೀಗಳಿಗೆ ಬ್ರಹ್ಮಶ್ರೀ ಪ್ರಶಸ್ತಿ

Spread the loveಕಪರಟ್ಟಿ ಕಳ್ಳಿಗುದ್ದಿ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಶ್ರೀಗಳಿಗೆ ಬ್ರಹ್ಮಶ್ರೀ ಪ್ರಶಸ್ತಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ …

Leave a Reply

Your email address will not be published. Required fields are marked *