ದಂಡ ಹಾಕುತ್ತಾರೆಂಬ ಭಯಕ್ಕೆ ಹೆಲ್ಮೇಟ್ ದರಿಸದೆ ಜೀವ ರಕ್ಷಣೆಗಾಗಿ ದರಿಸಿ : PSI ಕಿರಣ ಮೋಹಿತೆ
- ಗೋಕಾಕ : ಪೋಲಿಸ್ ಇಲಾಖೆಯವರು ದಂಡ ಹಾಕುತ್ತಾರೆಂದು ಹೆಲ್ಮೇಟ್ ದರಿಸಬೇಡಿ ನಿಮ್ಮ ಜೀವದ ಸುರಕ್ಷತೆಗೆ ಹೆಲ್ಮೇಟ್ ದರಿಸಿ ಕಾನೂನು ಪಾಲಿಸಿ ಕುಟುಂಬ ಉಳಿಸಿಕೊಳ್ಳಿ ಎಂದು ಗೋಕಾಕ ಗ್ರಾಮೀಣ ಪಿ,ಎಸ್,ಐ, ಕಿರಣ ಮೊಹಿತೆಯವರು ಕೊಣ್ಣೂರ ಪಟ್ಟಣದಲ್ಲಿ ಗೋಕಾಕ ಗ್ರಾಮೀಣ ಪೋಲಿಸ್ ಠಾಣಾವತಿಯಿಂದ ಹಮ್ಮಿಕೊಂಡ ಹೆಲ್ಮೇಟ್ ಜಾಥಾ ಕಾರ್ಯಕ್ರಮದಲ್ಲಿ ಹೆಲ್ಮೇಟ್ ಧರಿಸದೆ ವಾಹನ ಚಲಾಯಿಸುತ್ತಿರುವ ಸವಾರರಿಗೆ ಹೆಲ್ಮೇಟ್ ಹಾಕಿ ಅರಿವು ಮೂಡಿಸಿದರು.
ಇನ್ನು ಪೆಟ್ರೋಲ್ ಬಂಕಗೆ ತೆರಳಿ ಪೆಟ್ರೋಲ ಹಾಕಿಸಿಕೊಳ್ಳಲು ಬಂದವರಿಗೆ ದಿನಾಲು ಪೆಟ್ರೋಲ ಹಾಕಿಸಿಕೊಳ್ಳುವಂತೆ ಜೀವ ರಕ್ಷಣೆ ಮಾಡುವ ಹೆಲ್ಮೇಟ್ ದರಿಸುವದನ್ನು ಮರೆಯಬೇಡಿ, ಪೆಟ್ರೋಲ ನಿಮ್ಮ ವಾಹನವನ್ನು ಚಲಾಯಿಸಿದರೆ ಹೆಲ್ಮೆಟ್ ನಿಮ್ಮ ಜೀವವನು ರಕ್ಷಿಸುತ್ತದೆ ಎಂದು ಮನವರಿಕೆ ಮಾಡಿದರು. ಅದಕ್ಕಾಗಿ ಸುಪ್ರಿಂಕೋರ್ಟು ಕಡ್ಡಾಯ ಕಾನೂನು ಜಾರಿ ಮಾಡಿರುವುದು ಪ್ರತಿಯೊಬ್ಬ ಸವಾರನ ರಕ್ಷಣೆಗಾಗಿ ,ದೇಶದ ಕಾನೂನನ್ನು ಪಾಲನೆ ಮಾಡುವುದು ಮತ್ತು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಒಂದು ವಾರಗಳ ಕಾಲ ಯಾವುದೇ ದಂಡವನ್ನು ವಿಧಿಸುವುದಿಲ್ಲ, ಕೇವಲ ಎಚ್ಚರಿಕೆಯನ್ನು ಮಾತ್ರ ನೀಡುವುದಾಗಿ ಪಿ,ಎಸ್,ಐ, ಕಿರಣ ಮೊಹಿತೆಯವರು ಹೇಳಿದರು. ಈ ಸಂದರ್ಭದಲ್ಲಿ ಎಸ್ ಐ, ಟಿ,ಎಸ್,ದಳವಾಯಿ, ಎಪ್, ಕೆ, ಗುರನಗೌಡರ, ಸಿಬ್ಬಂದಿಗಳಾದ ಎಮ್,ಎನ್ ಪರಮಶೆಟ್ಟಿ, ಡಿ ಜಿ ಕೊಣ್ಣೂರ, ನಾಗಪ್ಪ ದುರದುಂಡಿ, ಸಂಜೀವ್ ಎಂ,ಜೆ,ಎಂ, ನಾಗನೂರ, ಕಾಡಪ್ಪಾ ತಿಲಿಗಂಜಿ,ವಿಠ್ಠಲ್ ನಾಯಕವಾಡಿ, ದುಂಡೆಶ ಅಂತರಗಟ್ಟಿ ಸೇರಿದಂತೆ ಸ್ಥಳಿಯ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.