ಹುಲಿಕಟ್ಟಿ ಗ್ರಾಮದಲ್ಲಿ ಹನುಮ ಮಾಲಾಧಾರಿಸಿದ ಶ್ರೀರಾಮ ಭಕ್ತರಿಂದ ಶೋಭಾ ಯಾತ್ರೆ.
ಗೋಕಾಕ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಹನುಮ ಮಾಲಾ ಧರಿಸಿದ ಶ್ರೀ ರಾಮ್ ಭಕ್ತರಿಂದ ಗ್ರಾಮದಲ್ಲಿ ಶೋಭಾ ಯಾತ್ರೆಯು ಭಕ್ತಿ ಭಾವದಿಂದ ನಡೆಯಿತು. ಶೋಭಾ ಯಾತ್ರೆಗೂ ಪೂರ್ವದಲ್ಲಿ ಗ್ರಾಮದ ಗರಗದ ಶ್ರೀ ದುರ್ಗಾ ಮಾತಾ ದೇವಸ್ಥಾನದಲ್ಲಿ ಡಾ. ಮಹಾಂತ ಅಜ್ಜಯನ್ನವರು ಬೆಳಗ್ಗೆ ಶ್ರೀ ಕಾಳಿಕಾದೇವಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ನೆರವೇರಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು.
ದೇವಸ್ಥಾನಕ್ಕೆ ಆರತಿಯೊಂದಿಗೆ ಆಗಮಿಸಿದ ಸುಮಂಗಲಿಯರು ಹನುಮ ಮಾಲಾಧಾರಿಗಳ ಜೊತೆಯಲ್ಲಿ ಶೋಭಾ ಯಾತ್ರೆಯಲ್ಲಿ ಬಾಗಿಯಾಗಿ ರಸ್ತೆಯುದ್ದಕ್ಕೂ ಜೈ ಹನುಮಾನ, ಜೈ ಶ್ರೀರಾಮ ಘೋಷಣೆಗಳೊಂದಿಗೆ ಹನುಮಂತ, ಶ್ರೀರಾಮನ ಕುರಿತ ಭಜನೆ ಮೊಳಗಿಸುತ್ತಾ ಘೋಷಣೆ ಕೂಗುತ್ತ ಬೀರೇಶ್ವರ ದೇವಸ್ಥಾನ, ಹನುಮಾನ ಮಂದಿರ ಮತ್ತು ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹಾಗೂ ಗ್ರಾಮದಲ್ಲಿರುವ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಗೊ ಶಾಲೆಯಲ್ಲಿ ಮಹಾ ಪೂಜೆ ನೆರವೇರಿಸಿ ಪ್ರಸಾದ ಸೇವಿಸಿ ಆಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದರು.ಈ ಸಂದರ್ಭದಲ್ಲಿ ಹನುಮ ಮಾಲಾಧಾರಿಗಳಾದ ಲಕ್ಷ್ಮಣ,ದುಂಡಪ್ಪ,ಕುಮಾರ.ಯಮನುರ,ಉದಯ,ಹನುಮಂತ,ಸುಭಾಸ,ಸಚಿನ,ಕಲ್ಮೇಶ,ಸಿದ್ಲಿಂಗ,ಕಿರಣ್,ಯಶವಂತ,ಶ್ರೀಧರ,ಬಸವರಾಜ ಸೇರಿದಂತೆ ಸ್ಥಳೀಯ ಭಕ್ತರು ಬಾಗಿಯಗಿದ್ದರು.