ಕನ್ನಡ ನಾಮ ಫಲಕ ಅಳವಡಿಸದಿದ್ದರೆ,ಕಪ್ಪು ಮಸಿ ಬಳೆಯುವದಾಗಿ ಎಚ್ಚರಿಕೆ.
ಗೋಕಾಕ:ಜಯ ಕರ್ನಾಟಕ ಸಂಘಟನೆ ವತಿಯಿಂದ ನಗರದ ಸರ್ಕಲ್ ದಲ್ಲಿರುವ ಬಸವೇಶ್ವರ ಮೂರ್ತಿಗೆ ಹೂಮಾಲೆ ಹಾಕಿ ಅಲ್ಲಿಂದ ಪಾದಯಾತ್ರೆ ಮುಖಾಂತರ ನೂರಾರು ಸಂಘಟನೆಯ ಕಾರ್ಯಕರ್ತರು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಶಿಲ್ದಾರರ ಕಚೇರಿ ವರೆಗೆ ಹೋಗಿ ತಹಶಿಲ್ದಾರ ಕಛೇರಿಯ ಉಪವಿಭಾಗದ ಮಟ್ಟದ ಅಧಿಕಾರಿಯಾದ ಸಾಗರ ಕಟ್ಟೀಮನಿ ಅವರು ಮನವಿ ಪತ್ರ ಸ್ವೀಕರಿಸಿದರು.
ರ್ರಾಜ್ಯದಲ್ಲಿ ಎಲ್ಲ ಆಂಗಡಿ-ಮುಂಗಟ್ಟುಗಳ ಮೇಲೆ ನಾಮ ಫಲಕಗಳು ಶೇಕಡ 60% ರಷ್ಟು ಭಾಗ ಕನ್ನಡ ಭಾಷೆ ಕಡ್ಡಾಯವಾಗಿ ಹಾಕ ಬೇಕಾಗಿದ್ದು ಆದರೆ ಪ್ರಸುತ್ತ ಅನ್ಯ ಭಾಷೆಯ ಶೇಕಡ 60% ರಷ್ಟು ನಾಮ ಫಲಕಗಳ ಇದ್ದು ಕನ್ನಡ ಭಾಷೆ ಶೇಕಡ 40% ರಷ್ಟು ಹಾಕುವ ಮೂಲಕ ಕನ್ನಡ ನಾಡಿಗೆ ಹಾಗೂ ಭಾಷೆಗೆ ದ್ರೋಹ ಎಸಗುತ್ತಿದ್ದಾರೆ ಆದರಿಂದ ಗೋಕಾಕ ನಗರದಲ್ಲಿರುವ ಎಲ್ಲ ಆಂಗಡಿ-ಮುಂಗಟ್ಟುಗಳ ಮಾಲೀಕರಿಗೆ ಒಂದು ವಾರ ಗಡುವು ನೀಡಿ ನಾಮ ಫಲಕಗಳ ಮೇಲೆ ಕನ್ನಡಕ್ಕೆ ಮೊದಲ ಆದ್ಯತೆ ತರುವುದರ ಮೂಲಕ ಕೆಲಸ ಮಾಡಬೇಕು ಎಂದು ಮನವಿ ಮಾಡಲಾಯಿತು.
ಒಂದು ವೇಳೆ ಈ ಮನವಿಗೆ ಸ್ಪಂದಿಸದಿದ್ದರೆ ಜಯ ಕರ್ನಾಟಕ ಸಂಘಟನೆಯು ಉಗ್ರ ಹೋರಾಟ ಮಾಡಿ ಬೇರೆ ಭಾಷೆ ಇರುವ ನಾಮ ಫಲಕಗಳಿಗೆ ಕಪ್ಪು ಮಸಿ ಹಚ್ಚುವ ಮೂಲಕ ತಕ್ಕ ಉತ್ತರ ನೀಡಬೇಕಾಗುತ್ತದೆ. ಎಂದು ಈ ಮನವಿಯ ಮೂಲಕ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಗೋಕಾಕ ತಾಲೂಕ ಅಧ್ಯಕ್ಷರಾದ ಮಲಿಕಜಾನ ತಲವಾರ, ಕೊಟ್ರೇಶ ಪಟ್ಟಣಶೆಟ್ಟಿ, ಅಪ್ಪಾಸಾಬ ಮುಲ್ಲಾ, ಲಕ್ಷ್ಮೀ ಪಾಟೀಲ, ಇಮ್ರಾನ ಡಾಂಗೆ, ಶಬ್ಬೀರ ಮುಲ್ಲಾ, ಅಜರೋದ್ದಿನ ಸನದಿ, ಸಲೀಂಮ ಮುಲ್ಲಾ, ರಸೂಲ ಮಕಾಂದಾರ, ಮುಬಾರಕ ಬಾಳೆಕುಂದ್ರಿ, ಮೊಸಿನ ಪೈಲವಾನ, ಮೈನು ಅಂಡಗಿ, ಯುನುಸ್ ಬಸ್ಥಿ,ಇನ್ನೂ ಅನೇಕರು ಸೇರಿದ್ದರು.