🟥⬜🟨🟩🟦
ಜೈನ್ ಸಮಾಜದ ಬಹಳ ದಿನಗಳ ಕನಸು ನನಸಾಗುವ ಸಮಯ.
ಬೆಂಗಳೂರಿನಲ್ಲಿಂದು ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಸನ್ಮಾನ್ಯ ಶ್ರೀ ಡಿ.ಸುಧಾಕರ ರವರ ನೇತೃತ್ವದ ಜೈನ ಸಮಾಜದ ನಿಯೋಗ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಜೈನ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು, ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಇದೆ ಸು ಸಂದರ್ಭದಲ್ಲಿ ಜೈನ ಸಮಾಜಕ್ಕೆ ಬರುವ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡುವುದು ಮತ್ತು *ಶ್ರೀ ಕ್ಷೇತ್ರ ಶ್ರವಣಬೆಳಗೋಳ ವನ್ನು ಸಾಂಸ್ಕೃತಿಕ ಪಾರಂಪರಿಕ ನಗರ ವನ್ನಾಗಿ ಘೋಷಣೆ* ಮಾಡಬೇಕೆಂದು ಮನವಿ ಮಾಡಿದ ಸಂದರ್ಭದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಬರುವ ಬಜೆಟ್ ನಲ್ಲಿ ಬೇಡಿಕೆಗಳನ್ನು ಈಡೆರಿಸುವುದಾಗಿ ತಿಳಿಸಿದರು ,ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀ ಮಠದ ವತಿಯಿಂದ ಶ್ರೀ ರಾಜೇಶ ಖನ್ನಾ ರವರು , ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅಶ್ವಿತ್ ಜೈನ್ ರವರು , ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕರಾದ ಶ್ರೀ ಸುರೇಶ ತಂಗಾ ರವರು ,ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಶ್ರೀ ಅಜಿತ ಮುರಗುಂಡೆ ರವರು,ಬೆಳಗಾವಿ ಜೈನ ಸಮಾಜದ ಮುಖಂಡರಾದ ಶ್ರೀ ನೇಮಿನಾಥ ಚೌಗಲಾ ರವರು ಉಪಸ್ಥಿತರಿದ್ದರು.