ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಅನ್ಯಾಯಕ್ಕೊಳಗಾದ ರೈತರಿಗೆ ಕಾರ್ಮಿಕರಿಗೆ, ಶೇರುದಾರರಿಗೆ ನ್ಯಾಯ ಒದಗಿಸುವಂತೆ ನ.5 ರಂದು ಭಾರಿ ಪ್ರತಿಭಟನೆ
ಬೋರಗಾಂವ: ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯು ಎನ್‌ಸಿಎಲ್‌ಟಿಯಲ್ಲಿ ಹರಾಜು ಆಗಿದ್ದು, ಬರುವ ದಿ.5/11/2024 ರಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ, ವಿಜಯಪೂರ ಬಿಡಿಸಿಸಿ ಬ್ಯಾಂಕ, ಶ್ರೀ ಅರಿಹಂತ ಕೋ ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ಬೋರಗಾಂವ, ಶಿವಸಾಗರ ಸೌಹಾರ್ಧ ಬ್ಯಾಂಕ ಮತ್ತು ಕರಮವೀರ ಬ್ಯಾಂಕ ಪುಣೆ ಬ್ಯಾಂಕುಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಉತ್ತರ ಕರ್ನಾಟಕ ರೈತ ಹಾಗೂ ಕಬ್ಬು ಬೆಳೆಗಾರರ ಸಂಘದ ರೈತರು ಒತ್ತಾಯಿಸಿದರು.
ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ಮುಖ್ಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ರೈತರು ಒತ್ತಾಯಿಸಿದರು. ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ತಾವು ಒಬ್ಬರು ಕಮೀಟಿಯ ಸದಸ್ಯರು ಇದ್ದು, ಇದರಲ್ಲಿ ರೈತರಿಗೆ ಮತ್ತು 75,೦೦೦ ಶೇರುದಾರರಿಗೆ ಮತ್ತು 385 ಜನ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಎರಡು ತಿಂಗಳ ಹಿಂದೆ ವಿನಂತಿಸಿದ್ದರೂ ಸಹ ವಿನಂತಿಗೆ ಮಾನ್ಯತೆ ನೀಡದ್ದರಿಂದ 05/11/2024 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಶಿವಸಾಗರ ಸಕ್ಕರೆ ಕಾರ್ಖಾನೆಯ ಹರಾಜಿನಲ್ಲಿ140 ಕೋಟಿ ರೂ ಹರಾಜು ಆಗಿದ್ದು, ಬೆಳಗಾವಿ ಬಿಡಿಸಿಸಿ ಬ್ಯಾಂಕ, ವಿಜಯಪೂರ ಬಿಡಿಸಿಸಿ ಬ್ಯಾಂಕ, ಶ್ರೀ ಅರಿಹಂತ ಕೋ ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ಬೋರಗಾಂವ, ಶಿವಸಾಗರ ಸೌಹಾರ್ಧ ಬ್ಯಾಂಕ ಮತ್ತು ಕರಮವೀರ ಬ್ಯಾಂಕ ಪುಣೆ ಅದರಲ್ಲಿ ತಾವು ಒಬ್ಬರು ಸದಸ್ಯರಿದ್ದು, 14 ಕೋಟಿ ರೈತರ ಬಾಕಿ ಬಿಲ್ಲು ಮತ್ತು 75,೦೦೦ ಶೇರುದಾರರ ಹಣ, ದುಡಿಯುವ ಕಾರ್ಮಿಕರ ವೇತನ 37.05 ಕೋಟಿ ರೂಪಾಯಿ ಹಣವನ್ನು ಲೂಟಿ ಮಾಡಿ ಈ ಎಲ್ಲ ಬ್ಯಾಂಕಿನವರು ತಮ್ಮ ಬ್ಯಾಂಕಿನ ಹಣವನ್ನು ವಸೂಲಿಗಾಗಿ ಶೇರುದಾರರು, ಕಾರ್ಮಿಕರಿಗೆ ಹಾಗೂ ರೈತರಿಗೆ ಯಾವುದೇ ಹಣ ಕೊಡದೇ ಮೋಸ ಮಾಡಿರುತ್ತಾರೆ ಎಂದು ಆಪಾಧಿಸಿದರು.
ನಮ್ಮ ಶೇರುದಾರರ ಹಣ ಹಾಗೂ ಕಾರ್ಮಿಕರ ಹಣ ಹಾಗೂ ರೈತರ ಕಬ್ಬಿನ ಬಾಕಿ ಹಣವನ್ನು ತಾವು ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಅನ್ಯಾಯಕ್ಕೊಳಗಾದ ರೈತರು, ಕಾರ್ಮಿಕರು, ಶೇರುದಾರರಿಗೆ ನ್ಯಾಯ ಒದಗಿಸುವಂತೆ ಕಳೆದ 2 ತಿಂಗಳ ಹಿಂದೆ ಮನವಿ ಮಾಡಿಕೊಂಡರು ಇದೂವರೆಗೆ ಯಾವುದೇ ರೀತಿಯ ನ್ಯಾಯ ಒದಗಿಸಿಲ್ಲ, ಇದರಿಂದ ರೈತ ಸಂಘವು ದಿನಾಂಕ :05*11/2024 ರಿಂದ ತಮ್ಮ ಎಲ್ಲಾ ಬ್ಯಾಂಕುಗಳ ವಿರುದ್ಧ ಉಗ್ರವಾದ ಹಾಗೂ ಬ್ಯಾಂಕ ಬಂದ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಆಗ್ರಹಿಸಿದರು.
ಇಷ್ಟೇಲ್ಲ ರೈತರಿಗೆ ಅನ್ಯಾಯವಗಾಲು ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ಆಡಳಿತ ಮಂಡಳಿ ಕಾರಣವಾಗಿದ್ದು ಈ ಬಗ್ಗೆ ಸಾಕಷ್ಟು ಬಾರಿ ರೈತರು ಮನವಿ ಮಾಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಸಂಬ0ಧ ಪಟ್ಟ ಅಧಿಕಾರಿಗಳು ಈ ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ರೈತರಿಗೆ ಮತ್ತು ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರೈತರು ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ, ಜಿಲ್ಲಾಧ್ಯಕ್ಷ ಸದಾಶಿವ ಮಾತನವರ, ಸದಾಶಿವ ಉತ್ತೂರ ಸೇರಿದಂತೆ ಅನೇಕ ರೈತರು ಇದ್ದರು.