ವಿದ್ಯಾರ್ಥಿಗಳು ವಿವೇಕಾನಂದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಮಹಾವೀರ ಪಾಟೀಲ
ಗೋಕಾಕ : ತಾಲೂಕಿನ ಕೊಣ್ಣೂರಲ್ಲಿನ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ದಿನಾಂಕ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಆಚರಿಸಲಾಯಿತು. ಶಾಂತಿ ಸಾಗರ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅರುಣ ಹೋಳಿ,ಮಹಾವೀರ ಪಾಟೀಲ,ಸಿದ್ದಪ್ಪ ಬೊರಗಲ್ಲೆ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾವೀರ ಪಾಟೀಲ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಸತ್ಯಾನ್ವೇಷಿಯಾಗಿದ್ದರು ಹಾಗೂ ವೇದಗಳ ಹಿನ್ನಲೆಯಲ್ಲಿ ಸುದೃಢ ಸಮಾಜ ಹಾಗೂ ದೇಶವನ್ನು ಕಟ್ಟಲು ಸಾಧ್ಯ. ವಿದ್ಯಾರ್ಥಿಗಳು ವಿವೇಕಾನಂದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಪ್ರಖರ ಭಾಷಣಗಳ ಮೂಲಕ ಹಿಂದೂ ಮೌಲ್ಯಗಳತ್ತ ಪಾಶ್ಚಾತ್ಯರ ಗಮನ ಸೆಳೆದ, ಭಾರತದ ಮೇಲೆ ಪಾಶ್ಚಾತ್ಯರಿಗೆ ಗೌರವ ಮೂಡುವಂತೆ ಮಾಡಿದ ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು ಎಂದರು. ಶಾಲಾ ಮುಖ್ಯೋಪಾದ್ಯಾಯಿನಿಯಾದ ಕು.ಸುಧಾ ಪೂಜೇರಿ ಸ್ವಾಗತಿಸಿ ವಂದಿಸಿ ನಿರೂಪಿಸಿದರು.ಸ್ವಯಂ ಖಾನಾಪುರ,ದಿವ್ಯಾನಿ ದಾದಾನ್ನವರ,ಶ್ರೇಯಾಂಕ ದೊಡಬಂಗಿ ವಿವೇಕಾನಂದರ ಕುರಿತಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾರತಿ ಸಂಗೊಳ್ಳಿ,ಚಂದ್ರವ್ವಾ ಸುಕುಂಡೆ,ರೇಖಾ ಪೂಜೇರಿ,ಭಾರತಿ ಅಂಬಿಗೇರ,ಲಕ್ಷ್ಮೀ ನಡುವಿನಮನಿ,ಸುಮನ ಕುಂದರಗಿ,ಗೀತಾ ಹಲಗಿ,ಪ್ರಿಯಾಂಕಾ ಕಳ್ಳಿಮನಿ,ಶಾಸ್ವತಾ ಪಾಸಲಕರ ಸೇರಿಂದಂತೆ ಇನ್ನುಳಿದವರು ಉಪಸ್ಥಿತರಿದ್ದರು.