ತಿಂಗಳ ಸಂಬಳಕ್ಕಾಗಿ ಪರದಾಡುತ್ತಿರುವ ರಾಮ ಕಂಪ್ಯೂಟರ್ ಎಜೆನ್ಸಿ ಮೂಲದ ಡಿ.ಗ್ರುಪ್ ನೌಕರಸ್ಥರು.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ (ವಣ್ಣೂರ) ಡಾ.ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ರಾಮ ಕಂಪ್ಯೂಟರ್ ಮೂಲಕ ವಸತಿ ಶಾಲೆಯಲ್ಲಿ 11 ಜನ ಡಿ ಗ್ರೂಪ್ ಕೇಲಸ ಮಾಡುತ್ತಿರುವ ಬಡ ಕುಟುಂಬದವರು ಪ್ರತಿ ತಿಂಗಳಿಗೆ ಸರಿಯಾದ ಸಮಯಕ್ಕೆ ಸಂಬಳವಾಗದ ಕಾರಣ ಕುಟುಂಬ ನಿರ್ವಹಣೆ ಮಾಡುವುದು ತುಂಬ ಕಷ್ಟಕರ ಸಂಗತಿಯಾಗಿದೆ.
ರಾಮ ಕಂಪ್ಯೂಟರ್ ಗುತ್ತಿಗೆದಾರರಿಗೆ ಪ್ರತಿ ತಿಂಗಳ 2 ತಾರೀಖರಂದು ಡಾ.ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಿಂದ ಸರಿಯಾದ ಸಮಯಕ್ಕೆ ಹಾಜರಾತಿಯನ್ನು ರಾಮ ಕಂಪ್ಯೂಟರ್ ಇವರುಗಳಿಗೆ ನೀಡಿದರು ಸಹ ವಸತಿ ಶಾಲೆಯ ಡಿ ಗ್ರೂಫ್ ಕೆಲಸ ಮಾಡುತ್ತಿರುವ ಬಡ ಕುಂಟುಬದೊಂದಿಗೆ ಆಟವಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ಬಡವರ ಸಿಟ್ಟು ತುಟಿಯಮೇಲೆ ಎನ್ನುವ ಗಾದೆಯ ಮಾತು ಸತ್ಯಯನ್ನಿಸುವುದರಲ್ಲಿ ಎರಡು ಮಾತಿಲ್ಲ.
ಜಿಲ್ಲೆಯ ಇನ್ನುಳಿದ ವಸತಿ ಶಾಲೆಗಳಲ್ಲಿ ತಿಂಗಳ 3 ರಿಂದ 6 ನೇ ತಾರೀಖನಂದು
ಡಿ ಗ್ರೂಪ್ ನೌಕರಸ್ಥರ ಸಂಬಳವಾಗಿತ್ತದೆ ಆದರೆ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ನೇಸರಗಿಯ ಶಾಲೆಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರಸ್ಥರ ಸಂಬಳವನ್ನು ಮಾತ್ರ ರಾಮ ಕಂಪ್ಯೂಟರ್ ಗುತ್ತಿಗೆದಾರ ಮನಸ್ಸಿಗೆ ಬಂದಂತೆ ತಿಂಗಳ ಮಧ್ಯದಲ್ಲಿ ಅಥವಾ ತಿಂಗಳ ಕೊನೆಯವಾರ ಸಂಬಳವನ್ನು ಮಾಡುತ್ತಾರೆ ಹೀಗಾಗಿ ಗುತ್ತಿಗೆದಾರರಾದ ರಾಮ ಕಂಪ್ಯೂಟರ್ ಅವರಿಗೆ ಯಾರು ಹೇಳುವವರು ಮತ್ತು ಕೇಳುವವರು ಇಲ್ಲದಂತ್ತಾಗಿದೆ.
ನೊಂದ ಕಾರ್ಮಿಕರು : ನಾವುಗಳು ಪ್ರತಿ ತಿಂಗಳ ರಾಮ ಕಂಪ್ಯೂಟರ್ ಅವರಿಗೆ ಸಂಬಳಕ್ಕಾಗಿ ಹತ್ತು ಹಲವು ಬಾರಿ ಫೋನ್ ಮಾಡಿದರು ಸೂಕ್ತವಾದ ಪ್ರತಿಕ್ರಿಯೆ ನೀಡುತ್ತಿಲ್ಲ ಮುಖ್ಯವಾಗಿ ನಮ್ಮ ಶಾಲೆಯ ಡಿ ಗ್ರೂಫ್ ನೌಕರಸ್ಥರ ಪೋನ್ ತಗೆದುಕೊಳ್ಳುವುದಿಲ್ಲ. ಹೀಗಾಗಿ ನಾವುಗಳು ಬಡ ಕೂಲಿ ಕಾರ್ಮಿಕರು ಅದೇ ಸಂಬಳಕ್ಕಾಗಿ ಭೀಕ್ಷುಕರಂತ್ತೆ ಕಾಯಬೇಕಾಗಿದೆ. ಇದಕ್ಕೆ ಮೇಲಾಧಿಕಾರಿಗಳು ಸೂಕ್ತವಾದ ಪರಿಹಾರವನ್ನು ನೀಡಬೇಕಾಗಿದೆಂದು ಮಾಧ್ಯಮದವರ ಮೂಲಕ ತಮ್ಮ ಅಳಲುವನ್ನು ತೊರಿಕೊಂಡಿದ್ದಾರೆ.
ಇನ್ನಾದರೂ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಡಿ ಗ್ರೂಫ್ ಬಡ ನೌಕರಸ್ಥರ ಸರಿಯಾದ ಸಮಯಕ್ಕೆ ಸಂಬಳವು ದೊರೆಯುವಂತ್ತೆ ಆಗುತ್ತದೆಯೋ ಕಾದು ನೋಡೋಣ.