ಸಾಲಗಾರರಿಗೆ ಕಿರುಕುಳ ನೀಡಿದರೆ ಕರುನಾಡ ರಕ್ಷಣಾ ವೇದಿಕೆಯಿಂದ ಮೈಕ್ರೋ ಪೈನಾನ್ಸಗಳ ಕಚೇರಿ ದ್ವಂಸ.
ಗೋಕಾಕ : ಅಮಾಯಕ ಮಹಿಳೆಯರಿಗೆ ಸಾಲ ನೀಡಿ ಸಾಲ ಮರು ಪಾವತಿಗಾಗಿ ಕಿರುಕುಳ ನಿಡುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮವಾಗಬೇಕು ಹಾಗೂ ಆಂಧ್ರ ಸರಕಾರ ಜಾರಿಗೊಳಸಿದ ಮೈಕ್ರೋ ಫೈನಾನ್ಸ್ ನಿಯಂತ್ರನ ಕಾಯ್ದೆಯ ಮಾದರಿಯಲ್ಲಿ ನಮ್ಮ ರಾಜ್ಯ ಸರಕಾರವು ಫೈನಾನ್ಸ್ ಸಂಸ್ಥೆಗಳ ಚಟುವಟಿಕೆಗಳ
ಮೇಲೆ ನಿಯಂತ್ರನ ಹೆರಬೇಕೆಂದು ಕರುನಾಡ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ರಾಜ್ಯಾದಕ್ಷ ಮಂಜುನಾಥ ಜಲ್ಲಿ ಮೈಕ್ರೋ ಪೈನಾನ್ಸ್ ವಿರುದ್ದ ಹರಿಹಾಯ್ದರು.
ಎಷ್ಟೋ ಅಮಾಯಕ ಮಹಿಳೆಯರು ಮೈಕ್ರೋ ಫೈನಾನ್ಸ್‌ಗಳ
ಕಿರುಕುಳದಿಂದ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಸರಕಾರವು ಆದೇಶ ಮಾಡಿದರು ಸಹ ಫೈನಾನ್ಸ್ ಗಳ ಕಿರುಕುಳ ತಪ್ಪುತಿಲ್ಲ ಹಾಗೂ ಖಾಸಗಿ ಬ್ಯಾಂಕುಗಳ ಕಿರುಕುಳ ನೀಡಿ ಆತ್ಮಹತ್ತೆ ಮಾಡಿಕೊಂಡ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು
ಹಾಗೂ ಸರಕಾರವು ಕಟ್ಟುನಿಟ್ಟಿನ ಕ್ರಮವನ್ನ ಜಾರಿಮಾಡಬೇಕೆಂದು ಗೋಕಾಕ ತಹಸಿಲ್ದಾರ ಮೂಲಕ ಒತ್ತಾಯಿಸ ಸರಕಾರಕ್ಕೆ ಒತ್ತಾಯಿಸಿದರು.
ಇನ್ನು ಬಾಲಚಂದ್ರ ಬಣವಿಯುವರು ಮೈಕ್ರೋಪೈನಾನ್ಸಗಳು ಇದೆ ಕಿರುಕುಳ ನೀಡಲು ಮುಂದಾರೆ ಪೈನಾನ್ಸಗಳಿಗೆ ನುಗ್ಗಿ ದ್ವಂಸ ಮಾಡುತ್ತೇವೆಂದು ಮೈಕ್ರೋ ಫೈನಾನ್ಸಗಳಿಗೆ ಎಚ್ಚರಿಕೆ ನಿಡಿದರು.
ರಾಜ್ಯಾದಕ್ಷ ಮಲ್ಲಿಕಾರ್ಜುನ ಮುರಕುಂಬಿ ಇವರ ನೇತೃತ್ವದಲ್ಲಿ ಸರಕಾರಕ್ಕೆ ತಹಸಿಲ್ದಾರ ಮುಖಾಂತರ ಮೈಕ್ರೋ ಪೈನಾನ್ಸಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದರು.ಈ ಸಂದರ್ಭದಲ್ಲಿ ಈರಯ್ಯಾ ಪೂಜೇರಿ,ಚಂದ್ರಪ್ಪ ಇಜ್ಜನ್ನವರ, ವಿಠ್ಠಲ ಬಂಡಿವಡ್ಡರ,ಹನಮಂತ ಅರಬಾಂವಿ,ನಾಗಪ್ಪ ಗದಾಡಿ,ಆನಂದ ಅಂಗಡಿ,ದಾನಪ್ಪ ಕಂಬಾರ,ದುಂಡಪ್ಪ ಮಲ್ಲಾಡಿ,ಸದಾನಂದ ನಾವಿ, ಸಿದ್ದಪ್ಪ ಬನೆನ್ನವರ,ಬಸವರಾಜ ನುಗ್ಗಾನಟ್ಟಿ ಇನ್ನೂಳಿದವರು ಉಪಸ್ಥಿತರಿದ್ದರು.