ಅಮ್ಮಾ ಪೌಂಡೇಷನ್ ಪಯಣ ಎಷ್ಟೇ ಕಠಿಣವಾದರೂ ಸಮಾಜದಲ್ಕಿನ ಬದಲಾವಣೆಯ ಹೊಣೆ ಹೊತ್ತಿದೆ.
ಘಟಪ್ರಭಾ : ಅಮ್ಮಾ ಫೌಂಡೇಷನ್ ರಾಯಬಾಗದ 10ನೇ ವಾರ್ಷಿಕೋತ್ಸವ: ಸಮರ್ಪಣಾ, ಸೇವಾ ಮತ್ತು ಸ್ಫೂರ್ತಿ ದಿನ ಘಟಪ್ರಭಾದ ಹೊರವಲಯದಲ್ಲಿರುವ ಸೇವಾದಳದ ಸಭಾಭವನದಲ್ಲಿ ಅಮ್ಮಾ ಫೌಂಡೇಷನ್ ತನ್ನ 10ನೇ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಿತು.
ಇನ್ನು ಜ್ಯೋತಿ ಬೆಳಗಿಸಿ ಶೋಭಾ ಗಸ್ತಿ ಅವರು ಮಾತನಾಡಿ ಸಂಸ್ಥೆಯ ದಶಕದ ಸಾಧನೆಗಳ ಬಗ್ಗೆ ಭಾವನಾತ್ಮಕ ಮಾತನಾಡಿ. “ಈ ದಶಕದ ಪಯಣ ಎಷ್ಟೇ ಕಠಿಣವಾದರೂ, ನಾವೆಲ್ಲಾ ಸೇರಿ ಸಮಾಜದಲ್ಲಿ ಬದಲಾವಣೆಯ ಹೊಣೆ ಹೊತ್ತಿದ್ದೇವೆ. ನಮ್ಮ ಈ ಸೇವಾ ಯಾತ್ರೆ ನಿರಂತರವಾಗಿ ಮುಂದುವರಿಯಬೇಕು” ಎಂದು ಹೇಳಿದರು. ಇನ್ನು ಈ ಸಂಸ್ಥೆಯು 10 ವರ್ಷಗಳಿಂದ ನಿಸ್ವಾರ್ಥ ಸೇವೆ ಒದಗಿಸುತ್ತ ಯಶಸ್ವಿ ಪಯಣ ಮಾಡುತ್ತಾ ಸಮಾಜದಲ್ಲಿ ಬದಲಾವಣೆ ತರಲು ಸತತ ಪ್ರಯತ್ನಿಸುತ್ತಿದೆ,ಅಮ್ಮಾ ಫೌಂಡೇಷನ್ ತನ್ನ ಸಮಾಜಮುಖಿ ಕಾರ್ಯಗಳಲ್ಲಿ ಮುಂದುವರಿಯುವ ಪ್ರಣಾಳಿಕೆಯನ್ನು ಪುನರುಚ್ಛಾರ ಮಾಡಿಕೊಳ್ಳುವ ಪೀಠಿಕೆಯಾಗಿದೆ.
ಇದರಿಂದ ಹಲವಾರು ಜನ ಬದಲಾವಣೆ ಕೂಡ ಆಗಿದ್ದು ಇವತ್ತು ಸಂಭ್ರಮಿಸುವ ವಿಶೇಷ ದಿನವಾಗಿದೆ ಎಂದರು.
ಈ ಸಮಾರಂಭದಲ್ಲಿ ಸಮಾಜಸೇವೆ, ಸರ್ಕಾರಿ ಇಲಾಖೆ ಮತ್ತು ಖಾಸಗಿ ಕ್ಷೇತ್ರದ ಪ್ರಮುಖರಾದ ಟಿ ಡಿ ಹೆಚ್ ಎನ್ ಎಲ್ ನ ಭಾರತ ಮತ್ತು ನೇಪಾಳದ ದೇಶದ ನಿರ್ದೇಶಕರಾದ , ತಂಗಪೆರುಮಾಳ ಪೋನಪಾಂಡಿ,ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಷನ್, ಇನ್ಫೋಸಿಸ್ ಕುಮಾರಿ ಜೆನಿಫರ್ , ಸಾಗರ ಸೇವಕರಾದ ನಾರಾಯಣ ಕುಲಕರ್ಣಿ, ಸೇವಕ, ಸಂಸ್ಥೆಯ ಆನಂದ್ ಲೋಬೊ, ಗುಂಜ ಸಂಸ್ಥೆಯ ಡೇವಿಡ್, ಲೋಕಾಯುಕ್ತ ಡಿವೈಎಸ್ಪಿ ಎಲ್.ವೈ. ರಾಜೇಶ್, ಮಾಜಿ ಬಿಇಒ ಎ.ಬಿ. ಬಿರಾದಾರ ಪಾಟೀಲ್ ಮೂಡಲಗಿಯ ಬಿಇಒ ಗಜಾನನ ಮೆನ್ನಿಕೇರಿ, ಬಸವರಾಜ್ ಮಲಬದಿ, ಮುಖಂಡರಾದ ರಮೇಶ ಮಾದರ ಮತ್ತು ಬಸವರಾಜ ದೋಡ್ಡಮನಿ ಸ್ಥಳಿಯ ಸಂಸ್ಥೆಯ ಅದ್ಯಕ್ಷರಾದ ಸುಶಿಲಾಭಾಯಿ ಕಲ್ಲಪ್ಪ ಮಾಂಗ ಉಪಾದಕ್ಷರಾದ ಸಾವಿತ್ರಿ ಮಹಾದೇವ ರಾಜಂಗಳಿ, ಕಾರ್ಯದರ್ಶಿ ಶೋಭಾ ಸತ್ಯಪ್ಪ ಗಸ್ತಿ ಖಜಾಂಚಿ ಯಲ್ಲಪ್ಪ ಅಣ್ಣಪ್ಪ ಮಾದರ. ಸದಸ್ಯರುಗಳಾದ ಭಾರತಿ ತರಕಾರಿ, ಲಕ್ಷ್ಮಿ ರಾಘವೇಂದ್ರ ಹರಿಜನ,, ಸುನಿತಾ ಶಿವಪ್ಪ ಮಧಾಳೆ, ಮಂಜುಳಾ ಹರಿಜನ, ಕಲ್ಲಪ್ಪ ಮಾಂಗ, ರಾಜು ಗಸ್ತಿ, ಶಿವಪ್ಪ ಮಧಾಳೆ ಇವರಿಗೆ ಅಮ್ಮಾ ಫೌಂಡೇಷನ ಬೆಂಬಲ ನೀಡಿದ ದಾನಿಗಳು, ಸಹಾಯಕರಿಗೆ ಸ್ಮರಣೀಯ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ವೀ ಆಯೋಜನೆಗಾಗಿ ಎಲ್ಲಾ ಸಿಬ್ಬಂದಿ ಮತ್ತು ಸಹಾಯಕರಿಗೆ ವಿಶೇಷ ಧನ್ಯವಾದ ಅರ್ಪಿಸಿದರು.