Breaking News

ವಿದ್ಯಾರ್ಥಿ ಜೀವನದಲ್ಲಿ ಉನ್ನತ ಗುರಿಗಳು ಇರಬೇಕು: ರವೀಂದ್ರ ಗಡಾದಿ

Spread the love

ವಿದ್ಯಾರ್ಥಿ ಜೀವನದಲ್ಲಿ ಉನ್ನತ ಗುರಿಗಳು ಇರಬೇಕು: ರವೀಂದ್ರ ಗಡಾದಿ

ವಣ್ಣೂರು: ವಿದ್ಯಾರ್ಥಿಗಳಲ್ಲಿ ಒಳ್ಳೆಯ ಗುಣಗಳು ಮತ್ತು ಒಳ್ಳೆಯ ಸಂಸ್ಕೃತಿ ಇದ್ದರೆ ಆ ವಿದ್ಯಾರ್ಥಿಗಳ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ, ಮತ್ತು ವಿದ್ಯಾರ್ಥಿ ಜೀವನದಲ್ಲಿ ಉನ್ನತ ಗುರಿಗಳು ಇರಬೇಕು ಆ ಗುರಿಗಳ ಹಿಂದೆ ಗುರುವಿನ ಕೃಪೆಯು ಸದಾ ಇರುತ್ತದೆ ಎಂದು ಬೆಳಗಾವಿ ಉತ್ತರ ವಲಯದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಅಧೀಕ್ಷಕರಾದ ರವೀಂದ್ರ ಗಡಾದಿ ಹೇಳಿದರು.

ಅವರು ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ೨೦೨೫-೨೬ ನೇ ಸಾಲಿನ ೬ ನೇ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪವನ್ನು ಹಾಕಿ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಭಾರತ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಲ್ಲಿ ಹೋಗಿ ಸಾಧನೆ ಮಾಡಿದ್ದಾರೆ. ಸಾಧನೆ ಮಾಡುವುದಕ್ಕೆ ಯಾವುದೇ ಭಾಷೆಗಳ ಅಡೆ ತಡೆಗಳು ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಆಹಾರ. ಒಳ್ಳೆಯ ನಿದ್ದೆ ಮಾಡಿದರೆ ಓದಿನ ಕಡೆಗೆ ಹೆಚ್ಚು ಗಮನ ಹರಿಸಬಹುದು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳ ಜೀವನದ ಗುರಿ ಮತ್ತು ಸಾಧನೆಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂದು ತಿಳಿಸಿ ಐ.ಎ.ಎಸ್ ಐ.ಪಿ.ಎಸ್ ಕಲಿಕೆಗೆ ಮುಖ್ಯವಾಗಿ ೬ರಿಂದ ೧೨ನೇ ತರಗತಿಯಲ್ಲಿ ಚನ್ನಾಗಿ ಮನಸಿಟ್ಟು ಅರ್ಥ ಮಾಡಿಕೊಂಡು ಓದಿನ್ನೊಂದಿಗೆ ದಿನಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನು ನೋಡಿಕೊಂಡು ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ಬಿ ಪಾಟೀಲ ಅವರು ಮಾತನಾಡುತ್ತಾ ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ವಿಭಾಗದಲ್ಲಿ ಹತ್ತು ಹಲವು ಜಾನಪದ ಕಲೆಗಳು, ದೃಶ್ಯ ಕಲೆಗಳು, ಹಾಗೂ ಕ್ರೀಡಾ ವಿಭಾಗದಲ್ಲಿ ಒಳಾಂಗಣ ಕ್ರೀಡೆ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಸಾಧನೆ ಮಾಡಬಹುದು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯ ಚಿತ್ರಕಲಾವಿದರಾದ ಆನಂದ ಕೋಳಿಗುಡ್ಡೆ ಅವರು ಬೆಳಗಾವಿ ಉತ್ತರ ವಲಯದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಅಧೀಕ್ಷಕರಾದ ರವೀಂದ್ರ ಗಡಾದಿ ಅವರ ಭಾವಚಿತ್ರವನ್ನು ಬಿಡಿಸಿ ನೆನಪಿನಕಾಣಿಕೆಯಾಗಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಮನೋಜ ಕೆಳಗೇರಿ, ವಿಲಾಸ ಕಾಂಬಳೆs ಶಿವಲಿಂಗಪ್ಪ ಶೆಟ್ಟೆಣ್ಣವರ. ಮಹಾದೇವಪ್ಪಾ ಬಸರಗಿ. ಸಿದ್ದಾರೂಢ ಗಲಬಿ, ವಿಠ್ಠಲ ಪೂಜೇರಿ. ಯೋಗೇಶ ಮಾಳಗಿ. ರೀಧಾ ಬಂಡಿ. ರೂಪಾ ಆಣೆಗುದ್ದಿ. ಬಸವರಾಜ ಚೂರಿ. ಪ್ರವೀಣ ಬಡಿಗೇರ. ಸಿದ್ದರಾಮ ಮಲಮೇತ್ರಿ. ಶಿವಕಾಂತ ಮುಳಗುರ. ಶಿವು ಕುಂದರಗಿ. ರಾಜಶೇಖರ ಸೋಮನಟ್ಟಿ.
ಮಹಾಂತೇಶ ಬಮ್ಮಸಾಗರ, ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಚಿತ್ರಕಲಾ ಶಿಕ್ಷಕರಾದ ಆನಂದ ಕೋಳಿಗುಡ್ಡೆ ನಿರೂಪಿಸಿದರು. ಶ್ರೀನಾಥ ತಳವಾರ. ಸ್ವಾಗತಿಸಿದರು ದೈಹಿಕ ಶಿಕ್ಷಕರಾದ ಸಚೀನ ಕರಿಹೊಳ್ಳಿ ವಂದಿಸಿದರು


Spread the love

About Fast9 News

Check Also

ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಸೇರಿಸಿ ನಂದಿನಿ ಸೊಸೈಟಿ ಆರಂಭಿಸಿರುವುದಕ್ಕೆ ಬೆಮುಲ್ ಅಧ್ಯಕ್ಷ , ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ*

Spread the love*ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಸೇರಿಸಿ ನಂದಿನಿ ಸೊಸೈಟಿ ಆರಂಭಿಸಿರುವುದಕ್ಕೆ ಬೆಮುಲ್ ಅಧ್ಯಕ್ಷ , ಶಾಸಕ ಬಾಲಚಂದ್ರ …

Leave a Reply

Your email address will not be published. Required fields are marked *