Breaking News

ರಸ್ತೆ ಸುಧಾರಣೆಗೆ ಆರ್ಡಿಪಿಆರ್ ನಿಂದ ೧೦ ಕೋಟಿ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ* *ಕೌಜಲಗಿ- ಹೊನಕುಪ್ಪಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ*

Spread the love

*ರಸ್ತೆ ಸುಧಾರಣೆಗೆ*
*ಆರ್ಡಿಪಿಆರ್ ನಿಂದ ೧೦ ಕೋಟಿ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ*

*ಕೌಜಲಗಿ- ಹೊನಕುಪ್ಪಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ*

ಗೋಕಾಕ- ಆರ್ಡಿಪಿಆರ್ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗಾಗಿ ೧೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಮಂಗಳವಾರದಂದು ೧.೨೦ ಕೋಟಿ ರೂಪಾಯಿ ವೆಚ್ಚದ ತಾಲ್ಲೂಕಿನ ಕೌಜಲಗಿ- ಹೊನಕುಪ್ಪಿ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಯಾದವಾಡ ಮುಖ್ಯ ರಸ್ತೆಯಿಂದ ಕುಲಗೋಡ ಹಣಮಂತ ದೇವಸ್ಥಾನ ಹೊಸಟ್ಟಿ ಕೂಡು ರಸ್ತೆಗೆ ೬೦ ಲಕ್ಷ ರೂಪಾಯಿ, ಮುನ್ಯಾಳ ಲಕ್ಷ್ಮೀದೇವಿ ಗುಡಿಯಿಂದ ರಂಗಾಪೂರ ಕಮಲದಿನ್ನಿ ಮುಖ್ಯ ರಸ್ತೆಗೆ ೧.೨೦ ಕೋಟಿ ರೂಪಾಯಿ, ಯಾದವಾಡ ಒಂಟಗೋಡಿ ರಸ್ತೆ ಡಾಂಬರೀಕರಣಕ್ಕೆ ೧.೮೦ ಕೋಟಿ ರೂಪಾಯಿ, ಯಾದವಾಡ ಹರಿಜನ ಕೇರಿಯಿಂದ ಮುಧೋಳ ರಸ್ತೆತನಕ ೬೦ ಲಕ್ಷ ರೂಪಾಯಿ, ತಿಗಡಿಯಿಂದ ವಾಲೀಕಾರ ತೋಟದತನಕ ೬೦ ಲಕ್ಷ ರೂಪಾಯಿ, ಅರಭಾವಿ ಸತ್ತಿಗೇರಿ ಮಡ್ಡಿ ರಸ್ತೆ ಡಾಂಬರೀಕರಣಕ್ಕೆ ೧ ಕೋಟಿ ರೂಪಾಯಿ, ಯಾದವಾಡ ಸಂಗನಕೇರಿ ರಸ್ತೆಯಿಂದ ಫುಲಗಡ್ಡಿ ಕೂಡು ರಸ್ತೆಗೆ ೧.೨೦ ಕೋಟಿ ರೂಪಾಯಿ, ರಂಗಾಪೂರ ರಸ್ತೆಗೆ ೬೦ ಲಕ್ಷ ರೂಪಾಯಿ ಸೇರಿದಂತೆ ಒಟ್ಟು ೧೦ ಕೋಟಿ ರೂಪಾಯಿ ಅನುದಾನವು ಬಿಡುಗಡೆಗೊಂಡಿದೆ ಎಂದು ಮಾಹಿತಿ ನೀಡಿದರು.
ಉತ್ತಮ ಗುಣಮಟ್ಟದ ರಸ್ತೆಯ ಕಾಮಗಾರಿಯನ್ನು ಕೈಕೊಳ್ಳಬೇಕು. ಅವಧಿಗೂ ಮುನ್ನ ಕೆಲಸವನ್ನು ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಭಾ ಶುಗರ್ ನಿರ್ದೇಶಕ ಎಂ.ಆರ್. ಭೋವಿ, ಜಿ.ಪಂ. ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಎಂ.ಎನ್.ಶಿವನಮಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಅಶೋಕ ಉದ್ದಪ್ಪನವರ, ರಾಯಪ್ಪ ಬಳೋಳದಾರ, ನೀಲಪ್ಪ ಕೇವಟಿ,ಹೊಳೆಪ್ಪ ಲೋಕನ್ನವರ, ಸಿದ್ದಪ್ಪ ಹಳ್ಳೂರ, ಮಹೇಶ ಪಟ್ಟಣಶೆಟ್ಟಿ, ಬಿ.ಎಚ್.ಪಾಟೀಲ,ವೆಂಕಟೇಶ ದಳವಾಯಿ, ಶಂಕರ ಜೋತಿನವರ, ಶಾಂತಪ್ಪ ಹಿರೇಮೇತ್ರಿ, ಅವ್ವಣ್ಣ ಮೋಡಿ, ಬಸು ಜೋಗಿ, ಹಾಸೀಮ ನಗಾರ್ಚಿ, ಶ್ರೀಶೈಲ ಗಾಣಿಗೇರ, ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಪದ್ಮಭೂಷಣ ಬಿ.ಸರೋಜಾದೇವಿ ನಿಧನಕ್ಕೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸಂತಾಪ

Spread the loveಪದ್ಮಭೂಷಣ ಬಿ.ಸರೋಜಾದೇವಿ ನಿಧನಕ್ಕೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸಂತಾಪ ಗೋಕಾಕ- ಹಿರಿಯ ಚತುರ್ಭಾಷೆ …

Leave a Reply

Your email address will not be published. Required fields are marked *